ಅಪಘಾತ ಪ್ರಕರಣ: ೦5
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರವೀಣ್ ಪ್ರಾಯ: 30 ವರ್ಷ ತಂದೆ: ಪೂವಣಿ ಗೌಡ, ವಾಸ: ನಾರ್ಯ ಮನೆ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 30-12-2021 ರಂದು 21 ಕೆ 3027 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಹಾಗೂ ಸಹಸವಾರೆ ಮತ್ತು ಮಗು ವನ್ನು ಕುಳ್ಳಿರಿಸಿಕೊಂಡು ನೆತ್ರಾವತಿ ಕಡೆಯಿಂದ ಧರ್ಮಸ್ಥಳ ಕಡೆಗೆ ಹೊಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ಗ್ರಾಮದ ಮಡ್ಯೂಳಚೆಡಾವು ಎಂಬಲ್ಲಿಗೆ ತಲುಪುತ್ತಿದ್ದಂತೆ ಅದರ ಸವಾರ ಬೈಕನ್ನು ದುಡುಕುತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯ ಡಿವೈಡರ್ಗೆ ಢಿಕ್ಕಿ ಹೊಡೆದು ಬೈಕ್ ಸಮೇತ ಡಿವೈಡರ್ ಮೇಲೆ ಬಿದ್ದರು ಪರಿಣಾಮ ಬೈಕ್ನಲ್ಲಿದ್ದ ಸವಾರ ಹರೀಶ್ ರವರಿಗೆ ತಲೆಗೆ ಗುದ್ದಿದ ಗಾಯ,ಬಲ ಮೂಣಕಾಲಿಗೆ ತರಚಿದ ಗಾಯ,ಬಲಕೈಗೆ ತರಚಿದ ಗಾಯ,ಸಹ ಸಹಸವಾರೆ ಪವಿತ್ರ ರವರಿಗೆ ಬಲಬದಿಯ ಹುಬ್ಬಿನ ಮೇಲೆ ಗುದ್ದಿದ ಗಾಯ,ಎರಡು ಕೈಗಳಿಗೆ,ಎರಡು ಕಾಲುಗಳಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿರುತ್ತದೆ,ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ ನ್ಯೂರೂ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 102/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ನಿಶಾ ಕೆ ಎಸ್ ಪ್ರಾಯ: 48 ವರ್ಷ ಗಂಡ:ಮೋಹನ್ ದಾಸ್, ವಾಸ:ಶ್ರೀ ರಾಮ್ ನಿಲಯ,ಮುರಾಜೆ ಮನೆ, ಕೊಡಿಂಬಾಳ ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 31-12-2021 ರಂದು ಪಿರ್ಯಾದುದಾರರು ಸಂತೆಕಟ್ಟೆ ಬಳಿ ರಸ್ತೆ ದಾಟುತ್ತಿರುವ ಸಮಯ ಸುಮಾರು ಬೆಳಿಗ್ಗೆ 08.55 ಗಂಟೆಗೆ ಕೆಎ 21 ವೈ 2920 ನೇ ಮೋಟಾರು ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾಗೂ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದರು ಪರಿಣಾಮ ಪಾದಾಚಾರಿ ನಿಶಾ ರವರಿಗೆ ಎಡಕೈಯ ಮಣಿಗಂಟಿಗೆ ಗುದ್ದಿದ ಗಾಯ ,ಹಣೆಯ ಬಲಬದಿಗೆ ಗುದ್ದಿದ ಗಾಯ,ಮೋಟಾರು ಸೈಕಲ್ ಸವಾರನಿಗೆ ಬಲಕಾಲಿನ ಮೊಣಗಂಟಿಗೆ,ಬಲ ಮತ್ತು ಎಡ ಕೈಯ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 103/2021, ಕಲಂ; 279,337 ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಇರ್ಷಾದ್ ಪ್ರಾಯ: 31 ವರ್ಷತಂದೆ: ಇಸ್ಮಾಯಿಲ್ ವಾಸ: M H Heights ಮೆಲ್ಕಾರ್ , ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ:31.12.2021 ರಂದು KA-70-E -9249 ನೇ ಸ್ಕೂಟರ್ ನಲ್ಲಿ ಅವರ ತಾಯಿ ಶ್ರೀಮತಿ ಸಫಿಯಾ ರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ A J Research ಎದುರು ಗಡೆ ತಲುಪಿದಾಗ ಹಿಂದಿನಿಂದ ಬಂದ ಲಾರಿಯೊಂದು ಓವರ್ ಟೇಕ್ ಮಾಡಲು ಪ್ರಯತ್ನಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿ ಹಾಗೂ ಅವರ ತಾಯಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತಪಡಿಸಿದ ಲಾರಿಯನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 148/2021 ಕಲಂ 279,337 ಐಪಿಸಿ & 134 (ಎ&ಬಿ) ಮೊ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರೆಮಿ ಸೇರಾಮ ಪ್ರಾಯ 34 ವರ್ಷ ತಂದೆ:ಜಾನ್ ಸೇರಾಮ್ ವಾಸ:ಬಲ್ಯ ಮನೆ, ಬರಿಮಾರ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:31-12-2021 ರಂದು ಪ್ರಶಾಂತ್ ಹೊಟೇಲ್ ಮಾಲಿಕರಾದ ಗಂಗಾಧರಗೌಡ ಬಾಬ್ತು ಹೊಂಡಾ ಡ್ರೀಮ್ ಯುಗ ದ್ವಿಚಕ್ರ ವಾಹನ KA-19-EG-7713ನೇದರಲ್ಲಿ ಗಂಗಾಧರಗೌಡರು ಸವಾರರಾಗಿ ಪಿರ್ಯಾಧಿ ಸಹ ಸವಾರರಾಗಿ ಸೂರಿಕುಮೇರುವಿನಿಂದ ಬರಿಮಾರ್ ಕಡೆಗೆ ಹೊಗುತ್ತಿದ್ದ ಸಮಯ ಬೆಳಿಗ್ಗೆ 10.05 ಗಂಟೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಡಮಡ್ಕ ಎಂಬಲ್ಲಿಗೆ ತಲುಪಿದಾಗ ಬರಿಮಾರು ಕಡೆಯಿಂದ ಬರುತ್ತಿದ್ದ KA-70-0299ನೇ ಅಟೋ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಅಟೋ ಚಲಾಯಿಸಿ ತೀರಾ ಬಲಬದಿಗೆ ಬಂದು ಪಿರ್ಯಾಧಿದಾರರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿರುತ್ತಾನೆ. ಪಿರ್ಯಾಧಿ ಹಾಗೂ ಗಂಗಾಧರಗೌಡರು ರಸ್ತೆಯ ಎಡ ಬದಿಯ ಕಚ್ಚಾ ಮಣ್ಣು ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾಧಿದಾರರ ಬಲಕಾಲಿನ ಮೊಣಕಾಲು, ಪಾದ, ಹಾಗೂ ಬೆರಳುಗಳಿಗೆ ತರಚಿದ ಗಾಯ ಆಗಿರುತ್ತದೆ ಅಲ್ಲದೇ ಗಂಗಾಧರಗೌಡರ ಬಲ ಕೈಗೆ,ಗುದ್ದಿದ ಗಾಯ,ಬಲಕಾಲಿನ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 172/2021 ಕಲಂ: 279,337 ಬಾಧಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜೆ ಸಿ ಜಯರಾಮ ರೈ (53) ತಂದೆ: ಚನ್ನಪ್ಪ ರೈ ವಾಸ: ಜಟ್ಟಿಪಳ್ಳ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರು ದಿನಾಂಕ 23.12.2021 ರಂದು ಸಮಯ ಸುಮಾರು 09:55 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಬಳಿಯಲ್ಲಿರುವ ಶ್ರೀದೇವಿ ಇಂಜೀನಿಯರಿಂಗ್ ವರ್ಕ್ ಎದುರು ನಿಂತುಕೊಂಡಿರುವ ಸಮಯ ಸುಳ್ಯ ಕಡೆಯಿಂದ ಕೆಎ 19ಎಂಇ 1360 ನೇದರ ಓಮಿನಿ ಕಾರು ಚಾಲಕ ವಿನೋದ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆಎ 21 ಎಕ್ಸ್ 3809 ನೇ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಅಭಿಲಾಷ್ ಎಂಬಾತನು ಮೋಟಾರ್ ಸೈಕಲ್ ಸಮೇತಯ ಮಣ್ಣು ರಸ್ತೆಗೆ ಬಿದ್ದು, ಆತನ ಬಲಕಾಲಿನ ಪಾದಕ್ಕೆ ಹಾಗೂ ಮಣಿಗಂಟಿಗೆ, ತಲೆಗೆ ರಕ್ತಗಾಯವಾದವನ್ನು ಅಲೇ ಇದ್ದ ಪಿರ್ಯಾದುದಾರರು ಮತ್ತು ಸ್ಥಳಿಯರು ಉಪಚರಿಸಿ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 106/2021 ಕಲಂ: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಯತ್ನ ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಕೇಶ್ ರೈ (36) ತಂದೆ: ಹುಕ್ರಪ್ಪ ರೈ ವಾಸ: ಪರ್ಪುಂಜ ಮನೆ ಒಳಮೊಗರು ಗ್ರಾಮ ಪುತ್ತೂರು ತಾಲೂಕು ಎಂಬವರು ಕೆಎ 21 ಸಿ 0008 ನೇ ಅಟೋ ರಿಕ್ಷಾವನ್ನು ಹೊಂದಿದ್ದು, ದಿನಾಂಕ: 28.12.2021 ರಂದು ರಾತ್ರಿ 09.15 ಗಂಟೆಗೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಏಳ್ಮುಡಿ ಎಂಬಲ್ಲಿ ರಾಮ್ ರಾಜ್ ಅಂಗಡಿಯ ಪಕ್ಕದಲ್ಲಿ ಅಟೋ ರಿಕ್ಷಾವನ್ನು ನಿಲ್ಲಿಸಿ 2 ನೇ ಮಹಡಿಯಲ್ಲಿರುವ ಓಯಸಿಸ್ ಪಾರ್ಲರ್ ಗೆ ಹೋಗಿ 15 ನಿಮಿಷದ ನಂತರ ವಾಪಾಸ್ ಬಂದು ರಿಕ್ಷಾವನ್ನು ಚಲಾಯಿಸಿಕೊಂಡು ಮನೆಗೆ ಹೋಗಿರುತ್ತಾರೆ. ದಿನಾಂಕ: 29.12.2021 ರಂದು ಬೆಳಿಗ್ಗೆ 8.00 ಗಂಟೆಗೆ ರಿಕ್ಷಾವನ್ನು ತೊಳೆಯುವ ವೇಳೆ ರಿಕ್ಷಾದ ಕ್ಯಾಶ್ ಬಾಕ್ಸ್ ನಲ್ಲಿದ್ದ ಡಿ.ಎಲ್, 3 ಪಾಸ್ ಪುಸ್ತಕ, 3 ಗ್ಯಾಸ್ ಪುಸ್ತಕ ಮತ್ತು ನಗದು ರೂ.32,000/- ಇಲ್ಲದೇ ಇದ್ದು, ನಂತರ ಫಿರ್ಯಾದಿದಾರರು ಹುಡುಕಾಟ ನಡೆಸಿದ್ದು, ದಿನಾಂಕ: 30.12.2021 ರಂದು ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯ ಬಳಿಯಲ್ಲಿ ಫಿರ್ಯಾದಿದಾರರ ದಾಖಲಾತಿಗಳು ಪತ್ತೆಯಾಗಿದ್ದು, ನಗದು ಪತ್ತೆಯಾಗಿರುವುದಿಲ್ಲ. ದಿನಾಂಕ: 28.12.2021 ರಂದು ರಾತ್ರಿ 09.15 ಗಂಟೆಯಿಂದ 09.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಬಾಬ್ತು ಅಟೋ ರಿಕ್ಷಾದ ಕ್ಯಾಶ್ ಬಾಕ್ಸ್ ನಲ್ಲಿದ್ದ ನಗದು ರೂ 32,000/-ವನ್ನು ಕಳವು ಮಾಡಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 115/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಸುಶೀಲ, 48 ವರ್ಷ, ಬಿನ್: ದಿ|| ಬಾಳಪ್ಪ, ವಾಸ: ಅಮ್ಚಿನಡ್ಕ ಆದಿ ದ್ರಾವಿಡ ಕಾಲೋನಿಮನೆ, ಮಾಡ್ನೂರು ಗ್ರಾಮ, ಪುತ್ತೂರು ತಾಲೂಕು ರವರು ಅವರ ಮಗ ಅವಿನಾಶ್.ಎ.ಬಿ ಹಾಗೂ ಇತರರು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೆಮ್ಮಾರ ಎಂಬಲ್ಲಿರುವ ಎಸ್.ಪಿ ಮುರಳೀಧರ ಎಂಬವರ ತೋಟಕ್ಕೆ ಅಡಿಕೆ ಹೆಕ್ಕುವ ಕೂಲಿ ಕೆಲಸಕ್ಕೆ ಹೋಗಿದ್ದು, ಸಮಯ 11-30 ಗಂಟೆಗೆ ಅವಿನಾಶ್.ಎ.ಬಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು, ತೋಟದ ಮಾಲಕರು ಹಾಗೂ ಇತರರು ಅವಿನಾಶ್.ಎ.ಬಿ ಯನ್ನು ಹುಡುಕಿದರೂ ಪತ್ತೆಯಾಗದೇ ಇದ್ದು, ಆತನು ಮರಳಿ ಮನೆಗೆ ಹೋಗಿರಬಹುದೆಂಬುದಾಗಿ ಭಾವಿಸಿ ಪಿರ್ಯಾದಿದಾರರು ಹಾಗೂ ಇತರರು ಸಂಜೆಯ ವರೆಗೆ ಕೂಲಿ ಕೆಲಸ ಮಾಡುತ್ತಿದ್ದು, ಸಂಜೆ ಮನೆಗೆ ಹೋಗಿ ನೋಡಲಾಗಿ ಅವಿನಾಶ್ .ಎ.ಬಿ ಮನೆಗೆ ಬಾರದೇ ಇದ್ದು, ಸಂಶಯಗೊಂಡು ಪುನಃ ಮುರಳೀಧರರವರ ತೋಟದಲ್ಲಿ ಹುಡುಕಿದಾಗ ತೋಟದಲ್ಲಿರುವ ಕೆರೆಯ ಬಳಿ ಕಾಲು ಜಾರಿದ ಗುರುತು ಹಾಗೂ ಅವಿನಾಶ್.ಎ.ಬಿ ಧರಿಸುತ್ತಿದ್ದ ಚಪ್ಪಲಿಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಅಗ್ನಿಶಾಮಕದಳದವರನ್ನು ಕರೆಸಿ ನೀರಿನ ಆಳದಲ್ಲಿ ಮುಳುಗಿದ್ದ ಹರೀಶನ ಮೃತದೇಹವನ್ನು ಮೇಲಕ್ಕೆ ತೆಗೆಯಲಾಗಿದ್ದು, ಅವಿನಾಶನು ಕೆಮ್ಮಾರ ಮುರಳೀಧರರವರ ತೋಟದಲ್ಲಿ ಅಡಿಕೆ ಹೆಕ್ಕುವ ಕೂಲಿ ಕೆಲಸ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಅಥವಾ ಆತನಿಗೆ ಈ ಹಿಂದಿನಿಂದಲೂ ಫಿಟ್ಸ್ ಖಾಯಿಲೆ ಇದ್ದು ಕೆರೆಯ ಬಳಿ ಹೋದ ವೇಳೆ ಫಿಟ್ಸ್ ಖಾಯಿಲೆಗೆ ಒಳಗಾಗಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 39/2021 ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.