ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶರೀಫ್.ಎಸ್, 37 ವರ್ಷ.ತಂದೆ: ದಿ|| ಉಮ್ಮರ್.ವಾಸ: ಬಡಕ್ಕೋಡಿ ಮನೆ, ಸರ್ವೆ ಗ್ರಾಮ, ಪುತ್ತೂರು ತಾಲೂಕು. ರವರು ನೀಡಿದ ದೂರಿನಂತೆ ದಿನಾಂಕ 29-09-2021 ರಂದು ಕಡಬ ತಾಲೂಕು ಕುದ್ಮಾರು ಗ್ರಾಮದ ಎರ್ಕಮೆ ಎಂಬಲ್ಲಿ ರಸ್ತೆಯ ಎಡ ಬದಿ ಕಚ್ಚಾ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರ ತಮ್ಮ ಹೈದರಾಲಿ ರವರು ಅವರ ಬಾಬ್ತು ಮೋಟಾರು ಸೈಕಲ್ ನಂ KA19R-4064 ನೇಯದ್ದನ್ನು ನಿಲ್ಲಿಸಿ ಪರಿಚಯದವರ ಜೊತೆ ಮಾತನಾಡುತ್ತಿರುವ ವೇಳೆ ಚಾರ್ವಾಕ ಕಡೆಯಿಂದ ಕುದ್ಮಾರು ಕಡೆಗೆ ಮೋಟಾರು ಸೈಕಲ್ ನಂ KA02-ET-7665 ನೇಯದ್ದನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ದಿಂದ ರಸ್ತೆಯ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಹೈದರಾಲಿರವರು ಕುಳಿತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ಗಳು ಜಖಂಗೊಂಡು ಹೈದರಾಲಿರವರಿಗೆ ಕಾಲಿಗೆ ಗಂಭೀರ ಗಾಯ ಹಾಗೂ ಇತರ ಕಡೆಗಳಲ್ಲಿ ತರಚಿದ ಗಾಯ ಮತ್ತು ಆರೋಪಿ ರಾಜೇಶ.ಕೆ ರವರಿಗೆ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯ ಉಂಟಾಗಿ ಚಿಕಿತ್ಸೆಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಾಜೇಶ.ಕೆ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಹಾಗೂ ಹೈದರಾಲಿಯವರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 47/2021 ಕಲಂ 279, 338 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಂ. ಇಬ್ರಾಹೀಂ, ಪ್ರಾಯ 72 ವರ್ಷ, ತಂದೆ: ದಿ|| ಸಯ್ಯದ್ ಬಾವಾ, ವಾಸ: ತ್ಯಾಗರಾಜ ರಸ್ತೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 30-09-2021 ರಂದು ತನ್ನ ಮಗಳ ಮನೆಯಿಂದ ಬಿ.ಸಿ.ರೋಡಿಗೆ ಹೋಗುವರೇ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕುಂಟಿಪಾಪು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ವಿಟ್ಲ ಕಡೆಯಿಂದ KA-19-EH-1189 ನೇ ಮೋಟಾರು ಸೈಕಲನ್ನು ಅದರ ಸವಾರ ರಾಜೇಂದ್ರ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರಿಗೆ ರಭಸವಾಗಿ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ಸವಾರ ಹಾಗೂ ಪಿರ್ಯಾದಿದಾರರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲಕಾಲಿಗೆ ಗುದ್ದಿದ ಗಾಯ, ಬಲಕೈಗೆ ಬೆರಳಿಗೆ ತರಚಿದ ಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಳರೋಗಿಯನ್ನಾಗಿ ದಾಖಲಿಸಿರುವುದಾಗಿದೆ. ಅಪಘಾತದಲ್ಲಿ ಗಾಯಗೊಂಡ ಮೋಟಾರು ಸೈಕಲ್ ಸವಾರ ರಾಜೇಂದ್ರರವರಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 102/2021  ಕಲಂ 279,337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಆಶಿಶ್ ಪ್ರಾಯ 31 ವರ್ಷ ತಂದೆ:ಅಬ್ದುಲ್ ಖಾದರ ವಾಸ:ಉಜಿರೆಬೆಟ್ಟು ಮನೆ ಕರಾಯ ಗ್ರಾಮ ಬೆಳ್ತಂಗಡಿ ತಾಲೂಕು ರವರ ಚಿಕ್ಕಮ್ಮನಾದ ಶ್ರೀಮತಿ ಫಾತಿಮಾ ಗಂಡ:ದಿ|| ಯು.ಉಸ್ಮಾನ್ ಶಾಫಿ ರವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ದಿನಾಂಕ: 28-09-2021 ಅವರ ಅಕ್ಕನ ಗಂಡ ತೀರಿಕೊಂಡಿರುವುದರಿಂದ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿಗೆ ಸಂಜೆ ಸಮಯ 7-00 ಗಂಟೆಗೆ ಮನೆಯ ಹಿಂಬದಿ ಬಾಗಿಲಿಗೆ ಚಿಲಕ ಹಾಗೂ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ: 30-09-2021 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರರ ಇನ್ನೊಂದು ಚಿಕ್ಕಮ್ಮರಾದ ಶ್ರೀಮತಿ ಶಹನಾಜ್ ರವರು ಫಿರ್ಯಾದಿದಾರರ ಮೊಬೈಲಿಗೆ ಕರೆ ಮಾಡಿ ಚಿಕ್ಕಮ್ಮ ಫಾತಿಮಾ ರವರ ಮನೆಯ ಹಿಂಬದಿ ಬಾಗಿಲನ್ನು ಯಾರೋ ಕಳ್ಳರು ಮೀಟಿ ತೆಗೆದು ಒಳಪ್ರವೇಶಿಸಿರುವುದಾಗಿ ತಿಳಿಸಿದ ಮೇರೆಗೆ, ಫಿರ್ಯಾದಿದಾರರು ಹೋಗಿ ನೋಡಿದಾಗ ಮನೆಯೊಳಗಿದ್ದ, ಮೂರೂ ಬೆಡ್ ರೂಮಿನಲ್ಲಿದ್ದ ನಾಲ್ಕೂ ಗಾದ್ರೇಜಿನ ಬಾಗಿಲನ್ನು ತೆರೆದು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹೊರಗೆ ಎಳೆದು ಹಾಕಿರುವುದು ಕಂಡು ಬಂದಿದ್ದು, ನಂತರ ವಿಚಾರವನ್ನು ಭೋಲಂತೂರಿನಲ್ಲಿದ್ದ ಚಿಕ್ಕಮ್ಮನವರಿಗೆ ತಿಳಿಸಿ, ಅವರು ಬಂದು ಪರಿಶೀಲಿಸಿದಲ್ಲಿ ಒಂದು ಮರದ ಗಾದ್ರೇಜ್ ನಲ್ಲಿಟ್ಟಿದ್ದ ರೂ 30,000/- ನಗದು ಹಾಗೂ 28 ಗ್ರಾಂ ತೂಕದ ಚಿನ್ನದ ಸರ-01, ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ -01, ಒಟ್ಟು 28 ಗ್ರಾಂ ತೂಕದ ಚಿನ್ನಾಭರಣದ ಅಂದಾಜು ಮೌಲ್ಯದ ರೂ,1,00,000/- ಆಗಿದ್ದು ಕಳವಾದ ನಗದು ಮತ್ತು ಚಿನ್ನಾಭರಣದ ಅಂದಾಜು ಮೌಲ್ಯ ರೂ 1,30,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 97/2021 ಕಲಂ:454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಪ್ಸ ಪ್ರಾಯ 24 ವರ್ಷ ಗಂಡ:ಮೊಹಮ್ಮದ್‌ ಅನ್ಸಾರ್ ವಾಸ:ಮಠಸಫಾ ನಗರ ಮನೆ ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ರವರ ಗಂಡನಾದ ಮೊಹಮ್ಮದ್‌ ಅನ್ಸಾರ್‌ (31) ಎಂಬಾತನು ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಬೇರೆ ವ್ಯವಹಾರ ಮಾಡುತ್ತೇನೆಂದು 02 ತಿಂಗಳ ಹಿಂದೆ ಕೇರಳಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಯಾವಗಲು ಒಂದು ಬಾರಿ ಪಿರ್ಯಾಧಿಗೆ ಕರೆ ಮಾಡುತ್ತಿದ್ದವರು, ದಿನಾಂಕ:29-09-2021 ರಂದು ಸಂಜೆ 5.30 ಗಂಟೆಗೆ ಪಿರ್ಯಾಧಿಯ ತಾಯಿಯ ಮನೆಯಾದ ಮುಡಿಪುವಿಗೆ ಬಂದು ದಿನಾಂಕ:30-09-2021 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ಬ್ಯಾಂಕಿಗೆ ಹೋಗಿ ಬರುವುದಾಗ ಹೇಳಿ ಹೋಗಿರುತ್ತಾರೆ. ಅಲ್ಲದೇ ಮದ್ಯಾಹ್ನ 3.30 ಗಂಟೆಗೆ ಪಿರ್ಯಾಧಿಗೆ ಕರೆ ಮಾಡಿ ಸ್ನೇಹಿತ ಹಣ ಕೊಡುತ್ತಾನೆ ಅದನ್ನು ತೆಗೆದುಕೊಂಡು ಬರಲು ಹೋಗುತ್ತೇನೆ ಎಂದು ತಿಳಿಸಿದ್ದು. ನಂತರ ಸಮಯ ಸುಮಾರು 4.45 ಗಂಟೆಗೆ ಪಿರ್ಯಾಧಿದಾರರ ಅತ್ತೆ ಆಯಿಶ ಫೌಝಿಯರವರು ಪಿರ್ಯಾಧಿಗೆ ಕರೆ ಮಾಡಿ ಅವರ ಮನೆಯಾದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ,ನಾರ್ಶ ಕೆ ಪಿ ಬೈಲು ಎಂಬಲ್ಲಿಂದ ಮೊಹಮ್ಮದ್‌ ಅನ್ಸಾರನನ್ನು ಯಾರೋ ಅಪರಿಚಿತರು ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 129/2021  ಕಲಂ: 365 ಬಾಧಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೀವನ್ ಪ್ರಾಯ 19 ವರ್ಷ ತಂದೆ: ಜಯರಾಮ ಗೌಡ ವಾಸ: ಪೆರುಂಬಾರು ಮನೆ, ಕನಕಮಜಲು ಗ್ರಾಮ ಸುಳ್ಯ ತಾಲೂಕು  ರವರ ತಂದೆ ಜಯರಾಮ ಗೌಡ ರವರು ಕೆಎಫ್‌ಡಿಸಿ ಯಲ್ಲಿ ಕ್ಯಾನ್ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 30.09.2021 ರಂದು ಬೆಳಿಗ್ಗೆ ಮನೆಯಲ್ಲಿ ಇಲ್ಲದೇ ಇದ್ದುದರಿಂದ ಕೆಲಸಕ್ಕೆ ಹೋಗಿರಬಹುದೆಂದು ತಿಳಿದಿದ್ದು, ಬೆಳಿಗ್ಗೆ 06.30 ಗಂಟೆಗೆ ಚಂದ್ರಶೇಖರರವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಜಯರಾಮ ಗೌಡ ರವರು ನಮ್ಮ ಜಾಗದ ಕೆರೆಯಲ್ಲಿ ನೀರಿನಲ್ಲಿ ಮುಳುಗಿದ ಸ್ಥೀತಿಯಲ್ಲಿ ಇದ್ದಾರೆ ಎಂದು ಹೇಳಿದಂತೆ ಪಿರ್ಯಾದಿದಾರರು ಕೂಡಲೇ ಹೋಗಿ ನೋಡಿದಾಗ ಕನಕ ಮಜಲು ಗ್ರಾಮದ ಕಾರಿಂಜ ಎಂಬಲ್ಲಿ ಚಂದ್ರಶೇಖರವರ ಬಾಬ್ತು ರಸ್ತೆ ಬದಿಯಲ್ಲಿ ಇರುವ  ತೋಟದ ಕೆರೆಯ ನೀರಿನಲ್ಲಿ ಅರ್ಧ ಮುಳುಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಪಿರ್ಯಾದಿದಾರರ ತಂದೆ ಜಯರಾಮ ಗೌಡರವರು ಈ ದಿನ ಬೆಳಿಗ್ಗೆ ಕೆಎಫ್‌ಡಿಸಿಗೆ ಕೆಲಸಕ್ಕೆ ಹೋಗುವ ಸಮಯ ಕಾರಿಂಜ ಎಂಬಲ್ಲಿ ರಸ್ತೆಯ ಬದಿಯಲ್ಲಿ ಇರುವ  ಕೆರೆಗೆ ಮುಖ ತೊಳೆಯಲು ಹೋದಾಗ ಕಾಲು ಜಾರಿ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾರೆ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಯುಡಿಅರ್  ನಂಬ್ರ 41/21 ಕಲಂ 174 ಸಿಅರ್‌ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಶೀಲ ಮರ್ಲಕುಮೇರ್ ಮನೆ, ನಿಡ್ಪಳ್ಳಿ ಗ್ರಾಮ ,ಪುತ್ತುರು ತಾಲೂಕು ರವರ ಗಂಡನಾದ ಸುಮಾರು 35 ವರ್ಷ ಪ್ರಾಯದ ದಿನೇಶ ಎಂಬವರು ವಿಪರೀತ  ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದರು. ದಿನಾಂಕ:-30.09.2021ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಫಿರ್ಯಾದುದಾರರು ನಿಡ್ಪಳ್ಲಿ ಗ್ರಾಮದ ಕಾನ ಎಂಬಲ್ಲಿಗೆ ತೆರಳುವಾಗ  ದಿನೇಶರವರು ತನ್ನ  ಮನೆಯಲ್ಲಿಯೇ ಇದ್ದು, ಫಿರ್ಯಾದುದಾರರು  ಕಾನಕ್ಕೆ ತೆರಳಿ ವಾಪಾಸು ಮಧ್ಯಾಹ್ನ ಸುಮಾರು  1.30 ಗಂಟೆಗೆ ತನ್ನ ಮನೆಗೆ ತೆರಳಿ  ನೋಡಿದಾಗ ಫಿಯಾದುದಾರರ  ಗಂಡನಾದ ದಿನೇಶರವರು  ತನ್ನ  ಮನೆಯ ಬಿದಿರಿನ ಅಡ್ಡಕ್ಕೆ  ಸೀರೆಯ  ತುದಿಯನ್ನು  ಕಟ್ಟಿ, ಸದ್ರಿ ಸೀರೆಯ  ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ  ತನ್ನ ಕುತ್ತಿಗೆಗೆ  ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಪಿರ್ಯಾದುದಾರರು  ಮತ್ತು  ದಿವ್ಯಾ ಎಂಬವರು ಸೇರಿಕೊಂಡು ದಿನೇಶರು ನೇಣು ಹಾಕಿಕೊಳ್ಳಲು ಉಪಯೋಗಿಸಿದ  ಸೀರೆಯನ್ನು  ತುಂಡರಿಸಿ, ,  ಸದ್ರಿಯವರನ್ನು  ನೆಲದ  ಮೇಲೆ ಮಲಗಿಸಿ ನೋಡಲಾಗಿ ದಿನೇಶರವರ ದೇಹದಲ್ಲಿ ಯಾವುದೇ ಚಲನೆ ಕಂಡು ಬರದೇ ಸದ್ರಿಯವರು ಮೃತಪಟ್ಟಿರುವುದು  ಕಂಡು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಯುಡಿಆರ್ 33/2021  ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-10-2021 10:20 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080