ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಶೀರ್ ಎ (40) ತಂದೆ: ದಿ. ಅಬುಬ್ಬಕ್ಕರ್, ಜನತಾ ಕಾಲೋನಿ, ನಾವೂರ ಗ್ರಾಮ,ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 29-11-2021 ರಂದು ಕೆಎ 21 ಡಬ್ಲ್ಯೂ 1978 ನೇ ಮೋಟಾರು ಸೈಕಲ್ನಲ್ಲಿ ಸವಾರ ಮೊಹಮ್ಮದ್ ರಫೀಕ್ ಎಂಬವರು ಸಹಸವಾರ ಮೊಹಮ್ಮದ್ ಶರೀಫ್ ಎಂಬವರನ್ನು ಕುಳ್ಳಿರಿಸಿಕೊಂಡು ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಕಸ್ಬಾ ಗ್ರಾಮದ ಹಳೇಕೋಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 19 ಎನ್ 6626 ನೇ ಓಮಿನಿ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಢಿಕ್ಕಿಹೊಡೆದನು ಪರಿಣಾಮ ಮೋಟಾರು ಸೈಕಲ್ ಸವಾರ ಮೊಹಮ್ಮದ್ ರಫೀಕ್ ರವರಿಗೆ ಬಲಭುಜಕ್ಕೆ, ಬಲ ಕೈಗೆ, ಬಲಕಿಬ್ಬೊಟ್ಟಿಗೆ ಹಾಗೂ ಸಹಸವಾರ ಮೊಹಮ್ಮದ್ ಶರೀಫ್ ರವರಿಗೆ ಬಲಕಾಲಿನ ತೊಡೆಗೆ ಗುದ್ದಿದ್ದ ಗಾಯಗಳಾಗಿರುತ್ತದೆ, ಗಾಯಳುಗಳು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 87/2021, ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರೋಹಿದಾಸ್ ಪ್ರಾಯ:46 ವರ್ಷ ತಂದೆ: ನೋಣಯ್ಯ ಪೂಜಾರಿ ವಾಸ: ಕಲ್ಲತಡಮೆ ಮನೆ , ಫರಂಗಿಪೇಟೆ ಅಂಚೆ ಪುದು ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 30-11-2021 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಸ್ಕೂಟರ್ ನಂಬರ್ KA 19 HC 3601 ನೇ ದನ್ನು ಅದರ ಸವಾರ ಸಹಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಾದಚಾರಿ ಪಿರ್ಯಾದಿಯ ತಂದೆ ನೋಣಯ್ಯ ಪೂಜಾರಿರವರಿಗೆ ಡಿಕ್ಕಿ ಹೊಡೆದು ಸ್ಕೂಟರ್ ನೊಂದಿಗೆ ರಸ್ತೆಗೆ ಬಿದ್ದು ಪಾದಚಾರಿ ಪಿರ್ಯಾದಿಯ ತಂದೆಗೆ ಮುಖಕ್ಕೆ ಬಲ ಕೈಗೆ ಎಡಕಾಲಿಗೆ ಎಡಕೈಗೆ ಗಾಯಗಳಾಗಿದ್ದು ಸ್ಕೂಟರನಲ್ಲಿದ್ದ ಸಹಸವಾರ ಮನ್ಸೂರ್ ಮತ್ತು ಸವಾರ ಪುತ್ತು ಬಾವ ರವರಿಗೆ ಸಣ್ಣಪುಟ್ಟ ಗಾಯಗಳಿದ್ದು ಪಿರ್ಯಾದಿದಾರರ ತಂದೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 130/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ವಿ ಅಬ್ದುಲ್ ಹಮೀದ್ ತಂದೆ ಹಾಜಿ ಉಸ್ಮಾನ್ ವಾಸ: ಉರುವಾಲು ಪದವು ಮನೆ, ಉರುವಾಲು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 29-11-2021 ರಂದು 12.30 ಗಂಟೆಯಿಂದ 18.00ಗಂಟೆಯ ಮದ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಉರುವಾಲು ಪದವು ಎಂಬಲ್ಲಿ ಪಿರ್ಯಾದಿದಾರರು ತನ್ನ ಕುಟುಂಬ ಸಮೇತ ತನ್ನ ಮಗಳ ಮನೆಯಾದ ನೆಲ್ಯಾಡಿಗೆ ಹೋಗಿದ್ದ ಸಮಯ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂಬಾಗಿಲಿನ ಮುಖೇನ ಮನೆಯೊಳಗೆ ಪ್ರವೇಶಿಸಿ ಕೋಣೆಯಲ್ಲಿರಿಸಿದ್ದ ಗೋದ್ರೆಜ್ ನಲ್ಲಿಟ್ಟಿದ್ದ ಸುಮಾರು 6 ಪವನ್ ತೂಕ 1 ನೆಕ್ಲೆಸ್ ಮತ್ತು 2 ಉಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 200000 ಆಗಿರುತ್ತದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 147/2021 ಕಲಂ 380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯಶವಂತ್, ಪ್ರಾಯ: 37 ವರ್ಷ, ತಂದೆ:ಸೀತಾರಾಮ ಶೆಟ್ಟಿ, ವಾಸ: ದುರ್ಗಾ ನಿವಾಸ, ಕೇನ್ಯ ಗ್ರಾಮ, ಸುಳ್ಯ ತಾಲೂಕು, ದ.ಕ ಜಿಲ್ಲೆ ರವರು ನೀಡಿದ ದೂರಿನಂತೆ ದಿನಾಂಕ 29-11-2021 ರಂದು ಪಿರ್ಯಾದಿದಾರರು ಬೆಳಿಗ್ಗೆ ಮಂಗಳೂರಿಗೆ ಹೋಗಿ ವಾಪಾಸ್ಸು ಬರುವಾಗ ಸಂಜೆ 07-30 ಗಂಟೆಗೆ ಐವತೊಕ್ಲು ಗ್ರಾಮ ಪಂಜ ಎಂಬಲ್ಲಿರುವ ಮಂಗಳ ಬಾರಿಗೆ ಪಾರ್ಸಲ್ ತರುವರೇ ಬಾರ್ ಒಳಗೆ ಹೋಗಿ ಹೊರಗೆ ಬರುತ್ತಿರುವ ಸಮಯ ಪಂಜದ ರಿಕ್ಷಾ ಚಾಲಕರಾದ ಸುಮಂತ್ ರೈ, ಹೇಮಂತ್ ಎಂಬವರು ಸುಮಾರು 10 ಜನ ರಿಕ್ಷಾ ಚಾಲಕರೊಂದಿಗೆ ಬಂದು ತಡೆದು ನಿಲ್ಲಿಸಿ ಸುಮಂತ್ ರೈ ಎಂಬಾತನು ಅವಾಚ್ಯ ಶಬ್ದಗಳಿಂದ ಬೈಯ್ದು ಹೇಮಂತ್ ಎಂಬಾತನು ಕೈಯಿಂದ ಬಲಗಣ್ಣಿಗೆ ಹಲ್ಲೆ ಮಾಡಿರುವುದಾಗಿದೆ. ಆಗ ಪಿರ್ಯಾದಿದಾರರು ಬೊಬ್ಬೆ ಹೊಡೆದಿದ್ದು ನಳಿನ್ ಹಾಗೂ ಅವಿನಾಶ್ ಎಂಬವರು ಹತ್ತಿರ ಬರುತ್ತಿದ್ದಂತೆ ರಿಕ್ಷಾ ಚಾಲಕ ಹೇಮಂತ್ನು “ಈ ಸಲ ತಪ್ಪಿಸಿಕೊಂಡಿ ಮುಂದಕ್ಕೆ ನನ್ನ ತಂಟೆಗೆ ಬಂದರೆ ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆಯೊಡ್ಡಿ ಅಲ್ಲಿಂದ ಹೋಗಿರುತ್ತಾನೆ. ಉಳಿದ ರಿಕ್ಷಾ ಚಾಲಕರು ಹಲ್ಲೆ ನಡೆಸಿರುವುದಿಲ್ಲ. ಪಿರ್ಯಾದಿದಾರರಿಗೆ ಹಲ್ಲೆ ನಡೆಸಿರುವ ಪರಿಣಾಮ ಬಲಗಣ್ಣಿಗೆ ನೋವು ಆಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರ ನಂಬ್ರ : 89-2021 ಕಲಂ: 341,323, 504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೀರ್ತಿರಾಜ್, ಪ್ರಾಯ 28 ವರ್ಷ, ತಂದೆ: ಗಣರಾಜ್, ವಾಸ: ಮನೆ ನಂಬ್ರ 5-315, ಕರಾವಳಿ ಸೈಟ್, ಬೆಂಜನಪದವು ಅಂಚೆ, ಕಳ್ಳಿಗೆ ಗ್ರಾಮ, ಬಂಟ್ವಾಳ ತಾಲೂಕು ರವರ ತಂದೆ ಗಣರಾಜ್ ಪ್ರಾಯ 55 ವರ್ಷ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಮೆಕ್ಯಾನಿಕ್-II ದರ್ಜೆ ಕೆಲಸ ಮಾಡಿಕೊಂಡಿದ್ದು ಹೃದಯಸಂಬಂಧಿ ಕಾಯಿಲೆ ಇದ್ದು ಅದಕ್ಕೆ ಸುಮಾರು 4 ವರ್ಷಗಳ ಹಿಂದೆ ಸ್ಟಂಟ್ ಅಳವಡಿಸಿದ್ದು, ಆ ಬಳಿಕ ಕಾಯಿಲೆಗೆ ವೈದ್ಯರಲ್ಲಿ ತೋರಿಸಿ ಪ್ರತಿದಿನ ಔಷಧಿ ಸೇವಿಸುತ್ತಿದ್ದಾರೆ. ದಿನಾಂಕ 30.11.2021 ರಂದು ತಂದೆ ಕೆಲಸಕ್ಕೆ ಹೋಗಿದ್ದು, ಸಮಯ ಸುಮಾರು 11.00 ಗಂಟೆಗೆ ವಾಪಾಸು ಬಂದಿದ್ದು ಬಳಿಕ ಮಧ್ಯಾಹ್ನ 1.00 ಗಂಟೆಗೆ ತಂದೆಯವರ ಮೊಬೈಲಿಗೆ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸದೇ ಇದ್ದು ಪಿರ್ಯಾಧಿದಾರರು ಸಮಯ 1.15 ಗಂಟೆಗೆ ಮನೆಗೆ ಬಂದಾಗ ಮನೆಯ ಅಂಗಳದಲ್ಲಿ ತಂದೆಯ ಬೈಕ್ ಇದ್ದು ಮನೆಗೆ ಬೀಗ ಹಾಕಿದ್ದು ಬೆಲ್ ಮಾಡಿದರು ಮನೆಯ ಬಾಗಿಲು ತೆಗೆಯದೇ ಇದ್ದಾಗ ಇನ್ನೊಂದು ಕೀಯಿಂದ ಮನೆಯ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಲಾಗಿ ಮನೆಯ ಒಳಗೆ ಇರುವ ಹೊಸ ಬೆಡ್ ರೂಂಗೆ ಅಳವಡಿಸಿದ ಕಬ್ಬಿಣದ ಜಿ.ಐ.ಪೈಪಿನ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಬಿಗಿದು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ನೇತಾಡಿಕೊಂಡಿದ್ದು ಬಳಿಕ ನೆರೆಕರೆಯವರನ್ನು ಕರೆಸಿ ತಂದೆಯವರನ್ನು ನೇಣಿನಿಂದ ಕೆಳಗಿಳಿಸಿ ನೋಡಲಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 44-2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀ ತೀರ್ಥಪ್ರಸಾದ್ ಎನ್ ,ಪ್ರಾಯ 27 ವರ್ಷ ,ತಂದೆ;ಶೇಷಪ್ಪ ಗೌಡ ,ನಳಿಯಾರು ಮನೆ ,ಡೊಡ್ಡತೋಟ ಅಂಚೆ ಅಮರಮುಡ್ನೂರು ಗ್ರಾಮ, ಸುಳ್ಯ ತಾಲೂಕು ರವರ ತಮ್ಮ ಚಂದ್ರಶೇಖರ ,ಪ್ರಾಯ 24 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಮದ್ಯಪಾನ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿದ್ದು ಹಣಕಾಸಿನ ಅಡಚಣೆಗೆ ಒಳಗಾದವರು ದಿನಾಂಕ 29-11-2021 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಸುಳ್ಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಮಧ್ಯಾಹ್ನ ವೇಳೆ ವಿಪರೀತ ಮದ್ಯಾಪಾನ ಮಾಡಿ ವಾಪಾಸ್ಸು ಮನೆಗೆ ಬಂದು ಊಟ ಮಾಡಿ ಸುಮಾರು 2-00 ಗಂಟೆಗೆ ಮನೆಯಿಂದ ಉಟ್ಟ ಬಟ್ಟೆಯಲ್ಲಿಯೇ ಎಲ್ಲಿಗೋ ಹೊರಟು ಹೋದವನು ಮನೆಗೆ ಬಾರದೇ ಇದ್ದಾಗ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು ದಿನಾಂಕ 30.11.2021 ರಂದು ಹುಡುಕುತ್ತಿರುವಾಗ ಪಿರ್ಯಾದಿದಾರರ ತಾಯಿ ವಸಂತಿಯವರು ಬೆಳಿಗ್ಗೆ 7-00 ಗಂಟೆಗೆ ಮನೆಯ ಹಿಂಬದಿ ಗುಡ್ಡದಲ್ಲಿ ಹುಡುಕುತ್ತಿರುವಾಗ ಪಿರ್ಯಾದಿದಾರರ ತಮ್ಮ ಚಂದ್ರಶೇಖರನು ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನೊಂದನ್ನು ಕಟ್ಟಿ ನೇತಾಡುತ್ತಿರುವುದನ್ನು ಕಂಡು ಬೊಬ್ಬೆ ಹೊಡೆದಾಗ ಹೋಗಿ ನೋಡಲಾಗಿ ಚಂದ್ರಶೇಖರನು ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿರುತ್ತಾನೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 29/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಿಜ್ವಾನ್ ಅಹಮ್ಮದ್ (39) ತಂದೆ: ದಿ, ಕೆ ಮೊಹಮ್ಮದ್ ವಾಸ: ಗಾಂಧಿನಗರ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ರವರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಎಂಬಲ್ಲಿ ಜನತಾ ಸ್ಟೋರ್ ಎಂಬ ದಿನಸಿ ಅಂಗಡಿಯನ್ನು ಹೊಂದಿದ್ದು ವ್ಯಾಪಾರಮಾಡಿಕೊಂಡಿರುತ್ತಾರೆ. ಅವರ ಬಾಬ್ತು ಮನೆಯಲ್ಲಿ ಬಾಡಿಗೆಗೆ ಇದ್ದ ಮೃತ ನಾರಾಯಣ ಸ್ವಾಮಿ (60) ಎಂಬಾತನು ವೀಪರಿತ ಮದ್ಯಸೇವನೆ ಮಾಡುವ ಚಟವನ್ನು ಹೊಂದಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದವನು, ದಿನಾಂಕ 30.11.2021 ರಂದು ತೀರ ಅಸ್ವಸ್ಥಗೊಂಡವನ್ನು ಪಿರ್ಯಾದುದಾರರ ಮತ್ತು ಅಲೇ ಇದ್ದ ಸ್ಥಳಿಯರೊಂದಿಗೆ ಚಿಕಿತ್ಸೆಯ ಬಗ್ಗೆ ಆ್ಯಂಬುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ನಾರಾಯಣ ಸ್ವಾಮಿಯನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣೆ ಯುಡಿಅರ್ ನಂಬ್ರ 52/21 ಕಲಂ 174 ಸಿಅರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ