ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೇಸಪ್ಪ ಮೂಲ್ಯ ಪ್ರಾಯ 68 ವರ್ಷ ತಂದೆ:ಸುಬ್ಬ ಮೂಲ್ಯ ವಾಸ:ಉರಿಮಜಲು ಮನೆ, ಇಡ್ಕಿದು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:06-12-2021 ರಂದು 13.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಅಳಿಕೆಮಜಲು ಶಾಲೆಯ ಬಳಿ ಎಂಬಲ್ಲಿ ಅಳಕೆಮಜಲು-ವಡ್ಯರ್ಪೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉರಿಮಜಲು ಕಡೆಯಿಂದ ತನ್ನ ಮನೆಗೆ ಕಡೆಗೆ ತನ್ನ ಮಗನ ಬಾಬ್ತು ಮೋಟಾರು ಸೈಕಲು  KA-19-EH-5147ನೇಯದರಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದಾಗ ಅಳಕೆಮಜಲು ಶಾಲೆಯ ಬಳಿ ನಿಲ್ಲಿಸಿದ್ದ KL-10-AU-4943ನೇದರ ಟಿಪ್ಪರ್‌ ಲಾರಿ ಚಾಲಕ ಲಾರಿಯನ್ನು ಒಮ್ಮಲೇ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾಧಿ ಸವಾರಿ ಮಾಡುತ್ತಿದ್ದ ಸ್ಕೂಟರಗೆ ಅಪಘಾತಪಡಿಸಿದ್ದು. ಪರಿಣಾಮ ಸ್ಕೂಟರ್‌ ಸವಾರರಿಬ್ಬರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತದಲ್ಲಿ ಪಿರ್ಯಾಧಿದಾರರಿಗೆ ಬಲ ಕಾಲಿನ ಕೋಲು ಕಾಲಿಗೆ ರಕ್ತಗಾಯಗಾಯವಾಗಿರುತ್ತದೆ. ಪಿರ್ಯಾಧಿ ಗಾಯಾಳು ಶೇಸಪ್ಪ ಮೂಲ್ಯರವರು ಚಿಕಿತ್ಸೆಯ ಬಗ್ಗೆ ಪೂತ್ತೂರಿನ ಆದರ್ಶ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು. ಸ್ಕೂಟರ್‌ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 161/2021  ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಸವಲಿಂಗಪ್ಪ ಎಡಿ ಪ್ರಾಯ 56 ವರ್ಷ ದಿ ವೀರಬದ್ರಪ್ಪ  ಎಡಿ ವಾಸ: ಎಡಿ ಕಾಲೋನಿ , ಹಿರೆಕೊಗಳೂರು ಗ್ರಾಮ ಮತ್ತು ಅಂಚೆ  ಚೆನ್ನಗಿರಿ ತಾಲೂಕು ದಾವಣಗೆರೆ ಹಾಲಿ ವಿಳಾಸ: ಅನುಗ್ರಹ ನಿಲಯ ಕಕ್ಯೆಪದವು ಉಳಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 08.12.2021 ರಂದು ಬೆಳಿಗ್ಗೆ ಅಗತ್ಯದ ಕೆಲಸದ ನಿಮಿತ್ತ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA19EP0701ನೇದರಲ್ಲಿ ಬಿಸಿರೋಡ್ ಗೆ ಹೋದವರು ಮರಳಿ ಮನೆಯ ಕಡೆಗೆ ಬಿ.ಸಿ ರೋಡ್-ಕಕ್ಯೆಪದವು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ ಸುಮಾರು 11-30 ಗಂಟೆಗೆ ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯೆಪದವು ಹಾಲಿನ ಡೈರಿ ಬಳಿ ಬರುತ್ತಿದ್ದಂತೆ ಎದುರಿನಿಂದ ಅಂದರೆ ಕಕ್ಯೆಪದವು ಕಡೆಯಿಂದ ಬಿಸಿರೋಡ್ ಕಡೆಗೆ KA21AB7439 ನೇ  ಅಟೋ ರಿಕ್ಷಾದ ಚಾಲಕನು ಅಟೋ ರಿಕ್ಷಾವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತಾ ಡಾಮಾರು ರಸ್ತೆಗೆ ಬಿದ್ದು, ಬಲ ಕಾಲಿನ ಮೂಳೆ ಮುರಿತದ ರಕ್ತ ಗಾಯವಾಗಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಪರಿಚಯದ ಪ್ರಭಾಕರ ಹಾಗೂ ಚಂದ್ರ ರವರು ಎತ್ತಿ ಉಪಚರಿಸಿ ಆರೈಕೆ ಮಾಡಿ ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜ್ಸಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಅಟೋ ಚಾಲಕನು  ಗಾಯಾಳು ಪಿರ್ಯಾದಿಯ ಯಾವುದೇ ವೈದ್ಯಕೀಯ ಆರೈಕೆ ಮಾಡದೇ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೂ ದಾಖಲಿಸದೇ ಅಪಘಾತದ ಮಾಹಿತಿಯನ್ನು ಪೊಲೀಸರಿಗೂ ನೀಡದೇ ಸ್ಥಳದಿಂದ ಓಡಿ ಹೋಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 92/2021 ಕಲಂ: 279,  338 ಐಪಿಸಿ ಮತ್ತು 134(ಎ)(ಬಿ)  ಐಎಂವಿ ಕಾಯ್ದೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುರೇಶ್ ಪೂಜಾರಿ (44) ತಂದೆ:ಕೃಷ್ಣಪ್ಪ ಪೂಜಾರಿ ವಾಸ: ಮೈರನಪಾದೆಕಳಾಯಿ ಅಮ್ಟಾಡಿ ಗ್ರಾಮ ಬಂಟ್ವಾಳ ತಾಲೂಕು.ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 08.12.2021 ರಂದು ಸಂಜೆ 7.00 ಗಂಟೆಗೆ ಮನೆ ಬೀಗ ಹಾಕಿ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಬಾಕ್ರಬೈಲ್ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಹೋಗಿದ್ದು ದಿನಾಂಕ: 09.12.2021 ರಂದು ಬೆಳಿಗ್ಗೆ 9.00 ಗಂಟೆಗೆ ಮನೆಗೆ ಬಂದು ನೋಡಲಾಗಿ, ಮನೆಯ ಬೀಗವನ್ನು ಮುರಿದು ಹಾಕಿರುವುದು ಕಂಡು ಬಂದಿದ್ದು ಪಿರ್ಯಾದುದಾರರು ತಾವು ಮಲಗುವ ಕೊಣೆಯ ಒಳಗಡೆ ಹೋಗಿ ನೋಡಲಾಗಿ ಬಟ್ಟೆಗಳೆಲ್ಲ ಕೆಳಗೆ ಬಿದ್ದಿದ್ದು ಪಿರ್ಯಾದಿದಾರರು ತಮ್ಮ  ರಿಕ್ಷಾ ಮಾರಾಟ ಮಾಡಿ ಕಪಾಟಿನಲ್ಲಿ ಇಟ್ಟಿದ್ದ 18000/- ರೂ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 144/2021  ಕಲಂ:   457,454,380  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಿರಂಜೀವಿ ಎಂ ಪ್ರಾಯ: 29 ವರ್ಷ ತಂದೆ: ಲಕ್ಷ್ಮಣ ಮೂಲ್ಯ ವಾಸ: ಮಣಿಮಜಲು ಮನೆ ಕಳೆಂಜ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ಆಟೋ ರಿಕ್ಷಾ ಬಾಡಿಗೆ ಮಾಡಿ ಕೊಂಡು ಜೀವನ ನಡೆಸುತ್ತಿದ್ದು, ದಿನಾಂಕ: 09-12-2021 ರಂದು ಪಿರ್ಯಾದಿದಾರರು ಆಟೋ ರಿಕ್ಷಾವನ್ನು ಸರ್ವಿಸ್ ಮತ್ತು ಆಯಿಲ್ ಚೇಂಜ್ ಮಾಡುವರೇ ಪುತ್ತೂರಿನ ಎ.ಪಿ..ಎಂ.ಸಿ ರಸ್ತೆಯ ಶ್ರೀ ಶೈಲ ಆಟೋ ವರ್ಕ್ಸ್ ನಲ್ಲಿ  ಆಯಿಲ್ ಚೇಂಜ್ ಮಾಡಿಸಿ ಬಳಿಕ ಹರ್ಷಿತ ಆಟೋ ಮೊಬೈಲ್ ನಲ್ಲಿ ರಿಪೇರಿ ಬಗ್ಗೆ ಹಣವನ್ನು ಕೊಟ್ಟು, ಎ.ಪಿ.ಎಂ.ಸಿ ರಸ್ತೆಯಲ್ಲಿ ಇರುವ ಹೊಟೇಲ್ ಆರಾಧ್ಯ ಎದುರು ಪಿರ್ಯಾದಿದಾರರ ಬಾಬ್ತು ಆಟೋ ರಿಕ್ಷಾವನ್ನು ನಿಲ್ಲಿಸಿ ಕಾಫಿ ಕುಡಿಯಲು ಹೊಟೇಲಿಗೆ ಹೋಗಿರುತ್ತಾರೆ. ಆಗ ಸಮಯ ಸುಮಾರು 11:30 ಗಂಟೆ  ಆಗಿರುತ್ತದೆ. ಪಿರ್ಯಾದಿದಾರರು ಹೊಟೇಲ್ ನಲ್ಲಿ ಕಾಫಿ ಕುಡಿದು ವಾಪಾಸ್ಸು ಆಟೋ ರಿಕ್ಷಾದ ಬಳಿಗೆ ಬಂದಾಗ ಆಟೋ ರಿಕ್ಷಾದ ಡ್ಯಾಶ್ ಬಾಕ್ಸ್ ತೆರೆದು ಕೊಂಡಿದ್ದು ಪರಿಶೀಲಿಸಿದಾಗ  ಪಿರ್ಯಾದಿದಾರರು ಡ್ಯಾಶ್ ಬಾಕ್ಸ್ ನಲ್ಲಿ ಬ್ಯಾಂಕಿಗೆ ಸಾಲದ  ಕಂತು ಪಾವತಿಸಲು ಇಟ್ಟಿದ್ದ ರೂಪಾಯಿ 18,000/- ಇರಲಿಲ್ಲ. ಪಿರ್ಯಾದಿದಾರರು ಹೊಟೇಲಿಗೆ ಚಾ ಕುಡಿಯಲು ಹೋಗಿ ಬರುವಷ್ಟರಲ್ಲಿ 11:30 ಗಂಟೆಯಿಂದ 11:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಆಟೋ ರಿಕ್ಷಾದ ಡ್ಯಾಶ್ ಬಾಕ್ಸ್ ನ ಲಾಕ್ ನ್ನು ಬಲತ್ಕಾರದಿಂದ ಮುರಿದು ಡ್ಯಾಶ್ ಬಾಕ್ಸ್ ನಲ್ಲಿರಿಸಿದ್ದ ರೂ 18,000/-  ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 109/2021  ಕಲಂ: 379  ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್‌ ಅಜೀಜ್‌ ಪ್ರಾಯ  35 ವರ್ಷ ತಂದೆ.  ಬಿ ಕೆ ಮಹಮ್ಮದ್‌ ವಾಸ:  ಕೆಮ್ಮಾರ ಜೇಡರ ಪೇಟೆ ಮನೆ, ಹಿರೆಬಂಡಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ದಿನಾಂಕ; 05-12-2021ರಂದು  18.00 ಗಂಟೆಗೆ ಪಿರ್ಯಾದಿದಾರರು  ಪುತ್ತೂರು ತಾಲೂಕು  ಹಿರೆಬಂಡಾಡಿ  ಗ್ರಾಮದ ಕೆಮ್ಮಾರ  ಸರಕಾರಿ ಶಾಲೆಯ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಆಟ ಆಡುತ್ತಿರುವಾಗ   ರನ್‌ ಔಟ್‌ನ ವಿಚಾರದಲ್ಲಿ    ಪಿರ್ಯಾದಿದಾರರಿಗೆ ಮತ್ತು  ಆರೋಪಿ ಶೌಕತ್‌ ಅಲಿ , ನಜೀರ್‌ , ಜುಬೇರ್‌ ರವರಿಗೆ ಚರ್ಚೆಯಾಗಿದ್ದು  ಆಟ ಮುಗಿಸಿ ಪಿರ್ಯಾದಿದಾರರು ಗ್ರೌಂಡ್‌ ನಲ್ಲಿ ಬರುತ್ತಿರುವಾಗ ಶೌಕತ್‌ ಅಲಿ ಎಂಬಾತನು ಪಿರ್ಯಾದಿದಾರರನ್ನುದ್ದೇಶಿಸಿ  ಅವ್ಯಾಚ್ಯ ಬೈದು, ಆತನ ಕೈಯಲ್ಲಿದ್ದ  ಬ್ಯಾಟ್‌ ನಿಂದ  ಬ್ಯಾಟ್‌ನಿಂದ ಪಿರ್ಯಾದಿದಾರರ ತಲೆಗೆ ಹೊಡೆಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಲು ಹೋದಾಗ  ಸದ್ರಿ   ಪೆಟ್ಟು ಪಿರ್ಯಾದಿದಾರರ ಹಲ್ಲಿಗೆ ತಾಗಿ ಗಾಯವಾಗಿದ್ದು ಈ ಸಮಯ ನಝೀರ್‌  ಮತ್ತು  ಜುಬೇರ್‌ ರವರು  ವಿಕೆಟ್‌ನಿಂದ  ಪಿರ್ಯಾದಿದಾರರ  ಬೆನ್ನಿಗೆ ಹಲ್ಲೆ ನಡೆಸಿರುವುದಲ್ಲದೆ    ಮುಂದಕ್ಕೆ  ಗ್ರೌಂಡ್‌ಗೆ ಬಂದರೆ  ಜೀವ ಸಹಿತ ಬದುಕಲು ಬಿಡುವುದಿಲ್ಲವೆಂದು ಹೇಳಿ ಜೀವ ಬೆದರಿಕೆಯೊಡ್ಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 156/2021  ಕಲಂ  504 324 506  ಜೊತೆಗೆ 34 ಐ ಪಿ ಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 09.12.2021 ರಂದು ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 155/2021  ಕಲಂ 504 323 506 354 ಜೊತೆಗೆ 34ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:09/12/2021 ರಂದು ಸಮಯ ಸುಮಾರು 17.30 ಗಂಟೆಗೆ ಕೃಷ್ಣಕಾಂತ ಪಾಟೀಲ್  ಪೊಲೀಸ್ ಉಪ ನಿರೀಕ್ಷಕರು  ಧರ್ಮಸ್ಥಳ ಪೊಲೀಸ್‌ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ  ಸೊಮಂತ್ತಡ್ಕ  ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಧಾಳಿ ನಡೆಸಿ 90 ಎಮ್ ಎಲ್ ನ 52 ಮದ್ಯ ತುಂಬಿದ  ಟೆಟ್ರಾ ಪ್ಯಾಕೇಟ್   ಅಂದಾಜು ಮೌಲ್ಯ ರೂ 1820/- ವಶಪಡಿಸಿದ್ದು, ಆಪಾದಿತನಾದ ಆನಂದ ಶೆಟ್ಟಿ ಎಂಬಾತನು ಓಡಿಹೊಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 81/2021 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-12-2021 10:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080