ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೈದರಾಲಿ(45) ತಂದೆ: ದಿ. ಯಾಕೂಬ್ ಬ್ಯಾರಿ, ವಾಸ: ಮಲ್ಲಿಗೆ ಮನೆ, ಸೊಮಂತಡ್ಕ, ಮುಂಡಾಜೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 10-06-2021 ರಂದು ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ, ಕಲ್ಲಾಜೆ ಎಂಬಲ್ಲಿ ಪಾದಚಾರಿ ಬಾಬು @ ಬಲ್ಲು ಎಂಬವರು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 7.30 ಗಂಟೆಗೆ ಕಾಜೂರು ಕಡೆಯಿಂದ ಸೊಮಂತಡ್ಕ ಕಡೆಗೆ ಕೆಎ 21ವೈ 6004 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಹಮೀದ್‌ ಎಂಬವರು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಾದಚಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದನು ಪರಿಣಾಮ ಪಾದಚಾರಿ ಹಾಗೂ ಬೈಕ್‌ ಸವಾರ ರಸ್ತೆಗೆ ಬಿದ್ದು ಪಾದಚಾರಿ ಬಾಬು @ ಬಲ್ಲುರವರು ಎಡಕಾಲಿಗೆ ಮತ್ತು ಬಲಕೈಗೆ ಗುದ್ದಿದ ಗಾಯ, ಹಾಗೂ ಬೈಕ್‌ ಸವಾರನಿಗೆ ಹಣೆಗೆ ಗುದ್ದಿದ ಗಾಯವಾಗಿರುತ್ತದೆ, ಪಾದಚಾರಿಯವರು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆ ಹಾಗೂ ಬೈಕ್‌ ಸವಾರ ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 49/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಾರ್ಜ್ ರೋಡ್ರಿಗಸ್ ಪ್ರಾಯ 60 ವರ್ಷ ತಂದೆ: ಜಾಕೋಬ್ ರೋಡ್ರಿಗಸ್ ವಾಸ: ಬಿಕರ್ನ್ ಕಟ್ಟೆ ಬಿಜ್ಜೂಡಿ ಮನೆ ರವರು ಮಂಗಳೂರಿನಲ್ಲಿರುವ ಇನಿತ್ ಕುಮಾರ ಜಲನ್ ರವರ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 10-06-2021 ರಂಧು ಕೊಯಮುತ್ತೂರಿನಿಂದ ಹೊರಟು  ದಿನಾಂಕ 11-06-2021 ರಂದು ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರ ಕೋಟ್ಲು ಟೋಲ್ ಗೇಟ್ ಎಂಬಲ್ಲಿ KA 20 D 5298 ನೇದರ ಲಾರಿಯನ್ನು ಚಲಾಯಿಸಿಕೊಂಡು  ಹೋಗುತ್ತಿರುವಾಗ ಸದ್ರಿ ಲಾರಿಯ ಹಿಂದಿನಿಂದ ಬಂದ ಒಬ್ಬ ಯುವಕ ಪಿರ್ಯಾಧಿದಾರರ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ  ಶಬ್ದಗಳಿಂದ ಬೈದು ಚಾಲಕ ಸೀಟಿನಲ್ಲಿದ್ದ ಪಿರ್ಯಾಧಿದಾರರ ಶರ್ಟಿನ್ ಕಾಲರ್ ಹಿಡಿದು ಕೆಳಗೆ ಎಳೆದು ದೂಡಿ ಹಾಕಿರುತ್ತಾನೆ. ದೂಡಿ ಹಾಕಿದ್ದ ಪರಿಣಾಮ ಪಿರ್ಯಾಧಿದಾರರ ಕೊರಳಿನಲ್ಲಿನ ಜಪ ಮಾಲೆ ಹಾಗೂ ಕೀಸೆಯಲ್ಲಿನ ಡಿ ಎಲ್, 2 ಸಾವಿರ ರೂ ಕೆಳಗೆ ಬಿದ್ದಿರುತ್ತದೆ, ಪಿರ್ಯಾಧಿದಾರರ ಶರ್ಟ್ ಹರಿದು ಹೋಗಿರುತ್ತದೆ. ಯುವಕನ ಬೈಕ್ ನಂಬ್ರ ತಿಳಿಯಲಾಗಿ KA 19 EL 1997 ಅಗಿದ್ದು ಸುಮಾರು 25 ರಿಂದ 30 ವರ್ಷದ ಪ್ರಾಯದವನಾಗಿರುತ್ತಾನೆ, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಕ್ರ: 65/2021 ಕಲಂ: 341, 504, 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:11.06.2021 ರಂದು ಬೆಳಿಗ್ಗೆ 9.30ಗಂಟೆಗೆ  ಉಪ್ಪಿನಂಗಡಿ ಪೊಲೀಸು ಠಾಣಾ ಪೊಲೀಸು ಉಪ-ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ರೌಂಡ್‌‌ನಲ್ಲಿರುವಾಗ ಪುತ್ತೂರು ತಾಲೂಉ ಉಪ್ಪಿನಂಗಡಿ  ಕಸಬಾ ಗ್ರಾಮದ    ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್ ನ್ ನೆಲ ಅಂತಸ್ತು ಕಟ್ಟಡದಲ್ಲಿರುವ ದೂಮ್ ಧಮಾಕ್  ಎಂಬ ಬಟ್ಟೆ ಹಾಗೂ ಚಪ್ಪಲಿಯ ಅಂಗಡಿಯ ಮಾಲಿಕ ಮೊಹಮ್ಮದ್‌ ರಪೀಕ್‌ @ ಸಿನಾನ್‌ ಎಂಬವರು ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ ಕೋವೀಡ್ ಸಾಂಕ್ರಮಿಕ ರೋಗ ಹರಡುವಿಕೆಗೆ ಕಾರಣಿಕರ್ತರಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ  55/2021 ಕಲಂ 269 IPC & ಕಲಂ 5(4) The Karnataka Epedamic decease Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಜಯ್‌ ಸಿ ಪ್ರಾಯ 33 ವರ್ಷ ತಂದೆ. ದಿ: ಚಿದಾನಂದಂ ಎನ್‌ ಅಂಚೆ ನಿರೀಕ್ಷಕರು,   ಬೆಳ್ತಂಗಡಿ ಉಪ-ವಿಭಾಗ, ಬೆಳ್ತಂಗಡಿ  ರವರು ನೀಡಿದ ದೂರಿನಂತೆ ಆರೋಪಿತ ಮಹೇಶ್‌ ಪ್ರಸಾದ್‌ ಸಿ ಎಂಬವನು  ದಿನಾಂಕ: 25-11-2016 ರಿಂದ 08-07-2018ರ ತನಕ ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದು ಆರೋಪಿತನು ತನ್ನ ಸರಕಾರಿ ಕರ್ತವ್ಯದ ಅವಧಿಯಲ್ಲಿ ದಿನಾಂಕ;15-09-2017ರಂದು ಕೆ ಪರಶುರಾಮ ಲಡ್ವರವರಿಂದ ಅಂಚೆ ಜೀವ ವಿಮೆಯ ಬಾಬ್ತು ರೂ.8079/- ನೇದನ್ನು ದಿನಾಂಕ: 27-11-2017ರಂದು  ಶ್ರೀ ಜನಾರ್ಧನ  ಎ ರವರಿಂದ ಗ್ರಾಮೀಣ ಅಂಚೆ ಜೀವ ವಿಮೆ  ಬಾಬ್ತು  ರೂ. 5557/- ನ್ನು  ಹಾಗೂ ದಿನಾಂಕ 10-05-2018 ರಂದು    ಶೀನಪ್ಪ ಗೌಡ ರವರಿಂದ  ಅಂಚೆ ಜೀವ ವಿಮೆ ಬಾಬ್ತು ರೂ.9525 ನೇದನ್ನು  ಉಪ್ಪಿನಂಗಡಿ ಉಪ  ಅಂಚೆ ಕಚೇರಿಯ  ಜೀವ ವಿಮೆ ಪ್ರೀಮಿಯಂ ಕಟ್ಟುವ ಕೌಂಟರ್‌ನಲ್ಲಿ ಸ್ವೀಕರಿಸಿಕೊಂಡು  ಸ್ವೀಕರಿಸಿದ ಹಣವನ್ನು ಸಂಬಂದಪಟ್ಟವರ  ಖಾತೆಗೆ ಜಮಾ ಮಾಡದೆ ಒಟ್ಟು ರೂ. 23161/-ನ್ನು ತನ್ನ ದುರ್ಬಳಕೆ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ಅಂಚೆ ಇಲಾಖೆಗೆ ಹಾಗೂ ಪಾಲಿಸಿದಾರರಿಗೆ ನಂಬಿಕೆದ್ರೋಹವೆಸಗಿ ವಂಚಿಸಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ  56/2021 ಕಲಂ 409 420 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಜಿತ್ ಕುಮಾರ್ ಪ್ರಾಯ 19 ವರ್ಷ ತಂದೆ: ತಿಮ್ಮಪ್ಪ ನಾಯ್ಕ್ ಎಂ ಕುವೆಂಜ ಮನೆ ಬೆಟ್ಟಂಪಾಡಿ ಗ್ರಾಮ ಪುತ್ತೂರು ತಾಲೂಕು ರವರ ತಂದೆ ತಿಮ್ಮಪ್ಪ ನಾಯ್ಕ್ 64 ವರ್ಷ ರವರು ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ 2012 ನೇ ಇಸವಿಯಲ್ಲಿ ನಿವೃತ್ತಿಯಾಗಿ ಬಳಿಕ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು, ಸೇವೆಯಿಂದ ನಿವೃತ್ತಿಯ ನಂತರ ತಿಮ್ಮಪ್ಪ ನಾಯ್ಕರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಆಸ್ಪತ್ರೆಯಿಂದ ಮದ್ದನ್ನು ಮಾಡಿಸಿದ್ದರೂ ಗುಣಮುಖವಾಗದೇ ಇದ್ದು, ದಿನಾಂಕ 10.06.2021 ರಂದು ಮಧ್ಯರಾತ್ರಿ ತಿಮ್ಮಪ್ಪ ನಾಯ್ಕರವರು ಖಿನ್ನತೆಗೆ ಒಳಗಾಗಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಪಿರ್ಯಾದಿದಾರರು ಮತ್ತು ಅವರ ತಾಯಿ ತಿಮ್ಮಪ್ಪ ನಾಯ್ಕರವರಿಗೆ ಸಮಾಧಾನಪಡಿಸಿ ಮಲಗುವಂತೆ ತಿಳಿಸಿದರೂ ರಾತ್ರಿ 02.00 ಗಂಟೆಯವರೆಗೆ ಮನೆಯಲ್ಲಿ ಕುಳಿತುಕೊಂಡಿದ್ದವರು ದಿನಾಂಕ 11.06.2021 ರಂದು ಬೆಳಿಗ್ಗೆ ಎದ್ದು ನೋಡಿದಾಗ ಪಿರ್ಯಾದಿದಾರರ ತಂದೆ ಮನೆಯಲ್ಲಿ ಕಾಣಿಸದೇ ಇದ್ದು, ಸುತ್ತಮುತ್ತ ಹುಡುಕಾಡುತ್ತಿರುವ ಸಮಯ ಕೂವೆಂಜ ನಿವಾಸಿ ಅಬ್ದುಲ್ ರಹಿಮ್‌ರವರು ಪಿರ್ಯಾದಿದಾರರ ತಾಯಿಗೆ ಕರೆಮಾಡಿ ತಿಮ್ಮಪ್ಪ ನಾಯ್ಕ್‌ ನಿಡ್ಪಳ್ಳಿ ಗ್ರಾಮದ ವಿಜಯನಗರ ಎಂಬಲ್ಲಿರುವ ವಿಜಯ ಆರಿಗರವರ ಗುಡ್ಡ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮತ್ತು ಮನೆಯವರು ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆ ಗೇರು ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯುಡಿಅರ್ ನಂಬ್ರ 19/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-06-2021 11:27 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080