ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್‌ ಕುಂಞ (59) ತಂದೆ:ಇಸ್ಮಾಯಿಲ್‌ ಬ್ಯಾರಿ ವಾಸ:ಒಕ್ಕೆತ್ತೂರು ಮನೆ ,ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ;11.01.2022 ರಂದು ಅಪ್ಪೇರಿಪಾದೆಯ ದಿ;ಕೃಷ್ಣಪ್ಪ ಎಂಬವರ ಮನೆಗೆ ಹೋಗಿ ತನ್ನ ಮನೆಯ ಕಚ್ಚಾ ರಸ್ತೆಯಿಂದ ವಿಟ್ಲ-ಉಕ್ಕುಡ ಮುಖ್ಯ ರಸ್ತೆಗೆ ಪ್ರವೇಶಿಸುವ ಸಮಯ ಮಧ್ಯಾಹ್ನ ಸುಮಾರು 2.30 ಗಂಟೆ ಸಮಯಕ್ಕೆ ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ಕೆಎ-19-ಇಎಫ್-9041 ನೇ ಸ್ಕೂಟರ್ ಸವಾರ ಅಜಿತ್ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಕಚ್ಚಾ ಮಣ್ಣು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಪಿರ್ಯಾಧಿದಾರರ ಮಾರುತಿ ರಿಟ್ಜ್ ಕಾರು ನಂಬ್ರ ಕೆಎ 21 ಎಂ 9337 ನೇಯದಕ್ಕೆ ಅಪಘಾತಪಡಿಸಿದನು. ಪರಿಣಾಮ ಮೋಟಾರು ಸೈಕಲ್‌ ಸವಾರನು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಆತನ ತಲೆಯ ಭಾಗಕ್ಕೆ ರಕ್ತಗಾಯವಾಗಿದ್ದು. ಪಿರ್ಯಾಧಿದಾರರು ಆತನನ್ನು ಉಪಚರಿಸಿ ತನ್ನ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದಂತೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 08/2022 ಕಲಂ:279  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಾರ್ತಿಕ್  ಪಿ ಎಸ್, ಪ್ರಾಯ 19 ವರ್ಷ, ತಂದೆ: ಶಿವಾನಂದ  ಎಂ, ವಾಸ: ಬಾಯಾರು ಪೆರುವಡಿ ಮನೆ, ಬಾಯಾರು ಗ್ರಾಮ, ಮಂಜೇಶ್ವರ ತಾಲೂಕು, ಕೇರಳ ರಾಜ್ಯ ರವರು ನೀಡಿದ ದೂರಿನಂತೆ ದಿನಾಂಕ 12-01-2022 ರಂದು 18-00 ಗಂಟೆಗೆ ಆರೋಪಿ  ಪೂರ್ವಿಶ್ರವರು ಕೆಎಲ್-14-ವಿ-1495ನೇ  ನೋಂದಣಿ ನಂಬ್ರದ ಬುಲೆಟ್ ಮೋಟಾರು ಸೈಕಲನ್ನು ನೆಹರೂ ನಗರ-ಬನ್ನೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನೆಹರೂನಗರ ಕಡೆಯಿಂದ ಬನ್ನೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ವಿವೇಕಾನಂದ ಕಾಲೇಜಿನ ದ್ವಾರದ ಬಳಿಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮೋಟಾರ್‌ ಸೈಕಲ್‌ ಕಂಪೌಂಡ್‌ ಗೋಡೆಗೆ ಅಪಘಾತವಾಗಿ, ಪೂರ್ವಿಶ್‌ರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದವರನ್ನು ಫಿರ್ಯಾದಿದಾರರು ಚರಣ್‌, ಗೋಕುಲ್‌ ಮೊದಲಾದವರೊಂದಿಗೆ  ಉಪಚರಿಸಿದ್ದು, ಪೂರ್ವಿಶ್‌ರವರಿಗೆ  ತಲೆಗೆ ಮತ್ತು ಹಣೆಗೆ ರಕ್ತಗಾಯ ಮತ್ತು ಮೈ ಕೈಗೆ ಗುದ್ದಿದ ನೋವಾಗಿದ್ದವರನ್ನು ಫಿರ್ಯಾದಿದಾರರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ ನಲ್ಲಿ ಮಂಗಳೂರು ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  06/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಂಜುನಾಥ (34) ತಂದೆ:ದಾಸಪ್ಪ ದಾಸ್‌ ವಾಸ:ನಂದರಬೆಟ್ಟು ಮನೆ ,ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ದ.ಕ ರವರು ದಿನಾಂಕ:12-01-2022 ರಂದು ಮಾಡತ್ತಾರು ದೈಸ್ಥಾನದ ಶ್ರಮದಾನದ ಕೆಲಸ ಮುಗಿಸಿ ರಾತ್ರಿ 9.30 ಗಂಟೆಗೆ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿರುವ ಪಿರ್ಯಾಧಿದಾರರ ಚಿಕ್ಕಪ್ಪ ಬಾಬುದಾಸ್‌ರವರ ಮನೆಯ ಬಳಿ ತಲುಪಿದಾಗ ಆಪಾದಿತ ಬಾಬುದಾಸ್‌ ರವರು ಪಿರ್ಯಾಧಿಯನ್ನು ತಡೆದು ನಿಲ್ಲಿಸಿ ತನ್ನ  ಮಗನನ್ನು ನೀರು ತೋಡಿನ ಕಿಂಡಿ ಅಣೆಕಟ್ಟಿನ ಕೆಲಸಕ್ಕೆ ಕರೆದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ,ಆತನ ಕೈಯಲ್ಲಿದ್ದ ರಾಡ್‌ನಿಂದ ಪಿರ್ಯಾಧಿದಾರರ ತಲೆಯ ಭಾಗಕ್ಕೆ ಹೊಡೆದಿದ್ದು ಆಗ ಪಿರ್ಯಾಧಿದಾರರು ಕುಸಿದು ಬಿದ್ದು ಬೊಬ್ಬೆ ಹೊಡೆಯುವುದನ್ನು ಕೇಳಿ ಪಿರ್ಯಾಧಿದಾರರ ತಮ್ಮ ಬರುವುದನ್ನು ಕಂಡು ಬಾಬುದಾಸ್‌ ರಾಡ್‌ನ್ನು ಬಿಸಾಡಿ ಓಡಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 09/2022 ಕಲಂ:341,324,504 ಬಾಧಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ದಯಾನಂದ ಗೌಡ ಪ್ರಾಯ:42 ವರ್ಷ ತಂದೆ: ಗಂಗಯ್ಯ ಗೌಡ ವಾಸ; ಅಪ್ಪಿಲ ಮನೆ ಬಯಲು ಅಂಚೆ ನೆರಿಯಾ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ  ದಿನಾಂಕ;12-01-20222 ರಂದು 18.30 ಗಂಟೆ ಸಮಯಕ್ಕೆ ಪಿರ್ಯಾಧಿ ದಯಾನಂದ ಗೌಡ ರವರ ತಮ್ಮ ಶೇಖರ ಗೌಡ ರವರ ಪತ್ನಿ ಶ್ರೀಮತಿ ಪ್ರತಿಮಾ  ರವರು ಏಕಾಎಕಿಯಾಗಿ ಪಿರ್ಯಾದುದಾರರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ  ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು  ನೀನಾಗಲೀ ನಿನ್ನ ಮನೆಯವರಾಗಲೀ ಬಂದರೆ ಕತ್ತಿಯಿಂದ ಕಡಿಯುತ್ತೇನೆ ಎಂದು ಅವ್ಯಾಚ ಶಬ್ದಗಳಿಂದ  ಬೈದು  ಪ್ರತಿಮಾಳು ಪಿರ್ಯಾದುದಾರರ ಎಡ ಕೈಯ ಬೆರಳಿಗೆ ಕಚ್ಚಿದಲ್ಲದೇ ಕಬ್ಬಿಣದ ರಾಡ್ ನಿಂದ ಬಲ ಬದಿ ಭುಜಕ್ಕೆ ಬಲ ಕಾಲಿನ ಮೊಣಗಂಟಿಗೆ ಹೊಡೆದಿರುತ್ತಾಳೆ. ಈ ಘಟನೆಗೆ ಕೌಟುಂಬಿಕ ವಿಚಾರವೇ ಕಾರಣವಾಗಿರುತ್ತದೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 05/2022  ಕಲಂ:447,504,324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕೊಲೆ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ  ಪ್ರಾಯ;47 ವರ್ಷ ಗಂಡ; ದಿ/ ಗಿರಿಯಪ್ಪ ವಾಸ; ಬರ್ಕಳ ಮನೆ  ಕೊಳ್ನಾಡು  ಗ್ರಾಮ ಬಾರೆಬೆಟ್ಟು ಅಂಚೆ ಬಂಟ್ವಾಳ ತಾಲೂಕು ರವರು ತನ್ನ ಗಂಡನ ಮನೆಯಿಂದ ದಿನಾಂಕ;11-01-2022 ರಂದು  ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ  ದೇವಸ ಎಂಬಲ್ಲಿರುವ ತನ್ನ ತವರು ಮನೆಗೆ ಬಂದಿದ್ದು ತವರು ಮನೆಯಲ್ಲಿ ತಂದೆ ಕೆಂಚಪ್ಪ ಗೌಡ ತಾಯಿ ಕುಂಞಮ್ಮ ಮತ್ತು ತಮ್ಮ ಸಾಂತಪ್ಪ ಎಂಬವರು ವಾಸವಾಗಿದ್ದು ತಮ್ಮ ಸಾಂತಪ್ಪ ಗೌಡನು ಭಾರತೀಯ ಜೀವ ವಿಮಾ ನಿಗಮದಲ್ಲಿ  ಏಜೆಂಟ್ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ;13-01-2022 ರಂದು  ಬೆಳಿಗ್ಗೆ ಸಮಯ ಸುಮಾರು 10.00 ಗಂಟೆಗೆ  ಸಾಂತಪ್ಪ ಗೌಡರು ಭಾರತೀಯ ಜೀವ ನಿಗಮದ ಕರ್ತವ್ಯಕ್ಕೆ ಮನೆಯಿಂದ ಹೊರಟು ಹೋಗುತ್ತಿರುವಾಗ ನೆರೆ ಮನೆಯ  ಸಂಬಂಧಿ ಜಯಚಂದ್ರ ಎಂಬಾತನು ನಮ್ಮ ಮನೆಯಿಂದ  ಮುಖ್ಯ ರಸ್ತೆಗೆ ಹೋಗುವ ಮಣ್ಣು ರಸ್ತೆಬದಿಯಲ್ಲಿ ಕೆಲಸದಾಳುಗಳೊಂದಿಗೆ ಬಲ್ಲೆ ತೆಗೆಯುತ್ತಿರುವ ಸಮಯ ಸಾಂತಪ್ಪನು ಜಯಚಂದ್ರರಲ್ಲಿ ರಸ್ತೆ ಬದಿಯಲ್ಲಿರುವ ಬಲ್ಲೆಯನ್ನು ಏಕೆ ತೆಗೆಯುತ್ತೀರಿ ಎಂದು ಕೇಳಿದಾಗ ಜಯಚಂದ್ರನು ಅವ್ಯಾಚ ಶಬ್ದಗಳಿಂದ ಬೈಯುತ್ತಿರುವುದನ್ನು ಕೇಳಿದ  ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಮನೆಯ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ  ಜೋಸೆಫ್ ಎಂಬವರು ನೋಡುತ್ತಿದ್ದಂತೆ ಜಯಚಂದ್ರನು ಸಾಂತಪ್ಪ ನಿಗೆ ಕೈಯಲ್ಲಿದ್ದ ಕತ್ತಿಯಿಂದ ಏಕಾಎಕಿಯಾಗಿ ಎಡ ಬದಿಯ ಕೆನ್ನೆಗೆ ಹಾಗೂ ಹಿಂಬದಿಯ ಕುತ್ತಿಗೆಗೆ ಕಡಿದು ಕೊಲೆ ಮಾಡಿರುತ್ತಾನೆ. ನಂತರ ಜಯಚಂದ್ರನು ಅಲ್ಲಿಂದ ಓಡಿ ತಪ್ಪಿಸಿಕೊಂಡಿರುತ್ತಾನೆ. ಪಿರ್ಯಾದುದಾರರ ಮನೆಯವರಿಗೂ  ಜಯಚಂದ್ರನ ಮನೆಯವರಿಗೂ ಜಮೀನು ವಿಚಾರದಲ್ಲಿ ಸುಮಾರು ವರ್ಷಗಳಿಂದ ತಕರಾರು ಇದ್ದು ಅದೇ ವಿಚಾರದಲ್ಲಿ ಜಯಚಂದ್ರನು ಸಾಂತಪ್ಪ ನನ್ನು ಕೊಲೆ ಮಾಡಿರುವುದಾಗಿದೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ  04/2022 ಕಲಮ;504,302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-01-2022 10:43 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080