ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶರತ್(22), ತಂದೆ:ಎಂಕಟರಾಮ್ ವಾಸ: ಎರಟಗೆರೆ ಕೊಪ್ಪಳ, ಅರಕಲ ಗೂಡು, ಹಾಸನ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 17-07-2021 ರಂದು ತನ್ನ ಗೆಳೆಯ ಸಿದ್ದ ಪ್ರಿಯನ ಬಾಬ್ತು ಕೆಎ 43 ಆರ್‌ 9938 ನೇ ದ್ವಿ ಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಧರ್ಮಸ್ಥಳ ಒಳ ರಸ್ತೆಯಿಂದ ಕಲ್ಲೇರಿ ಕಡೆಗೆ ಸಿದ್ದಪ್ರಿಯ ಸವಾರಿ ಮಾಡಿಕೊಂಡು ಹೋಗುವ ಸಮಯ ಸುಮಾರು ಬೆಳಿಗ್ಗೆ 9:30 ಗಂಟೆಗೆ   ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಅಮೃತ ವರ್ಷಿಣಿ  ಪಾರ್ಕಿಂಗ್‌ ಬಳಿ  ತಲುಪುತ್ತಿದ್ದಂತೆ ಪಿರ್ಯಾದುದಾರರ ವಿರುದ್ದ ದಿಕ್ಕಿನಿಂದ ಅಂದರೆ ಕಲ್ಲೇರಿ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 05 ಎಮ್. ಕ್ಯೂ  1521 ನೇ ಕಾರನ್ನು  ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು  ಬಂದು  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ದ್ವಿ ಚಕ್ರ  ಸವಾರ ಹಾಗೂ ಸಹಸವಾರ  ದ್ವಿ ಚಕ್ರ  ಸಮೇತಾ ರಸ್ತೆಗೆ ಬಿದ್ದು ದ್ವಿಚಕ್ರ ಸವಾರ ಸಿದ್ದಪ್ರಿಯ ರವರ ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು  ಗಾಯಾಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 54/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೇಕ್‌ ಸಲಾವುದ್ದೀನ್‌ , ಪ್ರಾಯ 27 ವರ್ಷ, ತಂದೆ: ಶೇಕ್‌ ಹಾರೂನ್‌, ವಾಸ:  ಮುಕ್ವೆ ಮಣಿಯ ಮನೆ, ನರಿಮೊಗರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 17-07-2021 ರಂದು 07-00 ಗಂಟೆಗೆ ಆರೋಪಿ ಕಾರು ಚಾಲಕ ರಾಮಚಂದ್ರ ಯಾನೆ ರಾಮಣ್ಣ ಎಂಬವರು KA-21-N-0980 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಹಳೆ ಬೋನಂತಾಯ ಆಸ್ಪತ್ರೆ ಕಟ್ಟಡದ ಬಳಿ ಬೊಳುವಾರು-ಪುತ್ತೂರು -ದರ್ಬೆ ಮುಖ್ಯ ಸಾರ್ವಜನಿಕ ಡಾಮಾರು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿರುವುದನ್ನು ರಸ್ತೆಯ ಬಲಭಾಗಕ್ಕೆ ಹೋಗಲು ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಒಮ್ಮಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಬೊಳುವಾರು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Y-8269 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಅಪಘಾತವಾಗಿ ಪಿರ್ಯಾದುದಾರರು ರಸ್ತೆಗೆ ಬಿದ್ದು, ಎಡಕಾಲಿನ ತೊಡೆ ಹಾಗೂ ಎಡಕೋಲು ಕೈಗೆ ಗುದ್ದಿದ ಒಳಗಾಯ ಹಾಗೂ ಮುಖಕ್ಕೆ ತರಚಿದ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  97/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಯತ್ನ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಖರ್‌ ಪೂಜಾರಿ ಕೆ ಪ್ರಾಯ 56 ವರ್ಷ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪೆರುವಾಯಿ ವ್ಯವಸಾಯ ಸಹಕಾರಿ ಸೇವಾ ಸಂಘ ಪೆರುವಾಯಿ ಎಂಬವರ ದೂರಿನಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದದಲ್ಲಿರುವ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು. ಸದ್ರಿ ಸಂಘದ ಕಟ್ಟಡದಲ್ಲಿ ಅಡಿಕೆ ,ಕೃಷಿ ಉತ್ಪನ್ನವಾದ ಕಾಳುಮೆನಸು ಹಾಗೂ ಅಡಮಾನದ ಚಿನ್ನವನ್ನು ಇಡುತ್ತಿರುವುದಾಗಿದೆ ಎಂದಿನಂತೆ ಕೆಲಸ ಮುಗಿಸಿ ನಿನ್ನೆ ದಿನಾಂಕ:16-07-2021 ರಂದು ಸಂಜೆ 5.45 ಗಂಟೆಗೆ ಪಿರ್ಯಾಧಿ ಹಾಗೂ ಜವಾನ್‌ ಬಾಲಕೃಷ್ಣರವರು ಸೊಸೈಟಿಗೆ ಬೀಗಹಾಕಿ ಹೋಗಿದ್ದು. ಈ ದಿನ ದಿನಾಂಕ:17-07-2021 ರಂದು ಬೆಳಿಗ್ಗೆ 09.30 ಗಂಟೆಗೆ ಸೊಸೈಟಿಗೆ ಬಂದು ಬೀಗ್‌ ತೆಗೆದು ಒಳಗಡೆ ಪ್ರವೇಶಿಸಿ ನೋಡಿದಾಗ ಸೊಸೈಟಿಯ ಮಹಡಿಯ ಹಂಚನ್ನು ಯಾರೋ ಕಳ್ಳರು ಕಳವು ಮಾಡುವು ಉದ್ದೇಶದಿಂದ ತೆಗೆದು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದು ಯಾವುದೇ ಹಣ,ಬೆಲೆ ಬಾಳುವ ವಸ್ತು ಸಿಗದೆ ಕಳವಿಗೆ ಪ್ರಯತ್ನಿಸಿರುವುದಾಗಿದೆ. ಸೇಫ ಲಾಕರ್‌ನಲ್ಲಿ ಇದ್ದ ಯಾವುದೇ ಬೆಲೆ ಬವಾಳುವ ವಸ್ತುಗಳು ಕಳವಾಗಿರುವುದು ಕಂಡು ಬಂದಿರುವುದಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 96/2021 ಕಲಂ:457,380,511 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳ್ಳತನ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಾರಾನಾಥ ಕೊಟ್ಟಾರಿ ಪ್ರಾಯ 48 ತಂದೆ ಆನಂದ ಕೊಟ್ಟಾರಿ ಕೊಡ್ಮಣ್ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಪಣಂಬೂರು ಟಿಂಬರ್ ಯಾರ್ಡ್ ನಲ್ಲಿ  ಕೆಲಸ ಮಾಡಿಕೊಂಡಿದ್ದು  ಅತ್ತೆ ಮನೆಯಲ್ಲಿರುವುದಾಗಿದೆ.ಸುಮಾರು 6 ವರ್ಷಗಳಿಂದ ಕೊಡ್ಮಣ್ ಗ್ರಾಮದಲ್ಲಿರುವ ಪಿರ್ಯಾದುದಾರರ ಮನೆಯನ್ನು  ಬಾಡಿಗೆ ಕೊಡುತ್ತಿದ್ದು ಪ್ರಸ್ತುತ 2 ವರ್ಷದಿಂದ ಯಾರಿಗು ಬಾಡಿಗೆ ಕೊಟ್ಟಿರುವುದಿಲ್ಲ.  ದಿನಾಂಕ 16.07.2021 ರಮದು ರಾತ್ರಿ 8.0 ಗಂಟೆಗೆ ಮನೆಗೆ ಹೋಗಿ ಸ್ವಚ್ಚ ಮಾಡಿ   ಪಿರ್ಯಾದುದಾರರು ಅತ್ತೆ ಮನೆಗೆ ಬಂದಿದ್ದು  ಈ ದಿನ   ಬೆಳಿಗ್ಗೆ 17.07.2021 ರಂದು ಪಿರ್ಯಾದುದಾರರ ಅತ್ತೆ ಉಮಾ ರವರು ತೋಟಕ್ಕೆ ಹೋಗಿ ಪಿರ್ಯಾದುದಾರರ ಬಾಡಿಗೆ ಕೊಡುವ ಮನೆಯಲ್ಲಿರುವ ಗಿಡಗಳಿಗೆ  ನೀರು ಹಾಕಿ ಬರುತ್ತಿದ್ದ ಸಮಯ ಎದುರಿನ ಬಾಗಿಲಿನ ಸಿಟೌಟ್ ನಲ್ಲಿ  ಸುಣ್ಣ ಹರಡಿರುವುದನ್ನು ಕಂಡು  ಪಿರ್ಯಾದುದಾರರಿಗೆ ತಿಳಿಸಿದ್ದು ಪಿರ್ಯಾದುದಾರರು ಕೂಡಲೇ ಹೋಗಿ ನೋಡಲಾಗಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ  ಸಾಧನದಿಂದ ಮುರಿದು ಮನೆಯ ಛಾವಡಿಯಲ್ಲಿಟ್ಟಿದ್ದ Inverter And Battery ಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳುವಾದ Inverter And Battery ಅಂದಾಜು ಬೆಲೆ 15000/- ರೂ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   76-2021 ಕಲಂ 457,380 ಐಪಿಸಿ       ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸು ಉಪ ನಿರೀಕ್ಷಕರಾದ ಪ್ರಸನ್ನ ಎಂ,ಎಸ್ ರವರು ದಿನಾಂಕ 17-07-2021 ರಂದು ಬೆಳಿಗ್ಗೆ  ಕಂಚಿನಡ್ಕ ಪದವು    ಎಂಬಲ್ಲಿ ಇಕ್ಬಾಲ್ @ ಕಡ್ಲೆ ಇಕ್ಬಾಲ್    ಎಂಬಾತನನ್ನು ವಶಕ್ಕೆ ಪಡೆದು ಆತನಿಂದ  ಸುಮಾರು1 ಕಿಲೋ 150 ಗ್ರಾಂ  ಮಾಧಕ ವಸ್ತುವಾದ ಗಾಂಜಾವನ್ನು ವಶಕ್ಕೆ ಪಡೆದಿದ್ದು ಇದರ ಅಂದಾಜು ಬೆಲೆ ರೂ 30,000/ ಆಗ ಬಹುದು  , ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   77-2021 ಕಲಂ  ಕಲಂ 8(C) r/w 20(B)(ii) (b) Narcotic Drugs And Psychotropic Substances Act 1985 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:17.07.2021 ರಂದು 21:30 ಗಂಟೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ  ಅ.ಕ್ರ 69/2021 ಕಲಂ:,506.IPC & 4.8 Pocso  Act  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರತ್ನಾವತಿ ಪ್ರಾಯ 58 ವರ್ಷ ಗಂಡ:ದಿ||ಅಣ್ಣು ನಾಯ್ಕ್‌ ವಾಸ:ಭೀಮಾವರ ಮನೆ, ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಮಗ ಬಿ ರಮೇಶ್‌ ಎಂಬವರು ಗಾರೆ ಕೆಲಸ ಮಾಡಿಕೊಂಡಿದ್ದವನು ಇತ್ತೀಚೆಗೆ ಒಂದು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಭೀಮಾವರ ಎಂಬಲ್ಲಿರುವ ಮನಯಲ್ಲಿ ಇರುತ್ತಿದ್ದು. ದಿನಾಂಕ:16-07-2021 ರಂದು ರಾತ್ರಿ ಸಮಯ 10.00 ಗಂಟೆಗೆ ಪಿರ್ಯಾಧಿದಾರರೊಂದಿಗೆ ಊಟ ಮಾಡಿ ಮನೆಯ ಹೊರಗಡೆಯ ಚಾವಡಿ ಪಕ್ಕದ ಕೋಣೆಯಲ್ಲಿ ಮಲಗಿದ್ದನು. ದಿನಾಂಕ:17-07-2021 ಬೆಳಿಗ್ಗೆ ಸುಮಾರು 08.30 ಗಂಟೆಗೆ ನೆರೆ ಮನೆಯ ಶಶಿಧರ ಎಂಬವರು ಪಿರ್ಯಾಧಿಯನ್ನು ಎಬ್ಬಿಸಿ ಪಿರ್ಯಾಧಿಯ ಮಗ ಬಿ ರಮೇಶ್ ಮನೆಯ ಹಂಚಿನ ಪಕ್ಕಸಿಗೆ ತಾನು ಸುತ್ತಿಕೊಂಡಿರುವ ಲುಂಗಿಯಿಂದ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತೀಲೀಸಿದಾಗ ಪಿರ್ಯಾಧಿದಾರರು ಹೋಗಿ ನೀಡಿದಾಗ ಪಿರ್ಯಾಧಿದಾರರ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 16/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-07-2021 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080