ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 2

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿರುಮಲೇಶ್ವರ ಭಟ್ ಪ್ರಾಯ 63 ತಂದೆ:ದಿ:ನಾರಾಯಣ ಭಟ್ ವಾಸ: ಕೊಂಕೋಡಿ  ಮನೆ, ಇಡ್ಕಿದು  ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ:17.01.2022 ರಂದು ಪಿರ್ಯಾಧಿದಾರರ ಬಾಬ್ತು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೊಂಕೋಡಿ ಎಂಬಲ್ಲಿರುವ ತೋಟದಿಂದ ಹಣ್ಣು ಅಡಿಕೆಯನ್ನು ಹೆಕ್ಕಿ ಮನೆಗೆ ಕೊಂಡು ಹೋಗುವರೇ ಒಂದು ಚೀಲದಲ್ಲಿ ಸುಮಾರು 1,000 ಅಡಿಕೆಯನ್ನು ಇಟ್ಟಿದ್ದು. ಸಂಜೆ ಸುಮಾರು  5.45 ಗಂಟೆಗೆ ಪಿರ್ಯಾಧಿದಾರರು ತನ್ನ ತೋಟದ ಬಳಿ ಹೋಗಿ ಸದ್ರಿ  ಹಣ್ಣು ಅಡಿಕೆಯನ್ನು ಮನೆಗೆ ತೆಗೆದುಕೊಂಡು ಬರುವರೇ ನೋಡಲಾಗಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆಯ  ದಿ. ಕುಂಡ ನಾಯ್ಕರ ಮಗ ಮೋಹನ ಎಂಬವನು ಪಿರ್ಯಾಧಿದಾರರು ತುಂಬಿಸಿ ಇಟ್ಟಿದ್ದ ಗೋಣಿ ಚೀಲದಿಂದ ಸುಮಾರು 500 ಹಣ್ಣು ಅಡಿಕೆಯನ್ನು ಬೇರೆ ಗೋಣಿ ಚೀಲಕ್ಕೆ ತುಂಬಿಸಿ ಕೊಂಡು ಹೋಗುವ ಸಮಯ ಪಿರ್ಯಾಧಿದಾರರು ಬೊಬ್ಬೆ ಹೊಡೆದರೂ ಆತನು ಕೇಳದೆ ಹಣ್ಣು ಅಡಿಕೆಯನ್ನು ಕೊಂಡು ಹೋಗಿರುತ್ತಾನೆ. ಆ ಸಮಯ ಆಸುಪಾಸಿನವರು ಬಂದು ನೋಡಿದಾಗ ಪಿರ್ಯಾಧಿದಾರರು ಹಣ್ಣು ಅಡಿಕೆ  ತುಂಬಿಸಿದ ಗೋಣಿ ಚೀಲದಲ್ಲಿ ಸುಮಾರು 500 ಹಣ್ಣು ಅಡಿಕೆ ಇದ್ದು  ಉಳಿದ ಹಣ್ಣು ಅಡಿಕೆಯನ್ನು ಮೋಹನ ನಾಯ್ಕ ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳುವಾದ ಹಣ್ಣು  ಅಡಿಕೆಯ ಅಂದಾಜು ಮೌಲ್ಯ 2000/- ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 13/2022  ಕಲಂ: 379 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಧರ ನಾಯರಿ  ಪ್ರಾಯ: 34 ವರ್ಷ ತಂದೆ: ನೀಲಕಂಠ ನಾಯರಿ  ವಾಸ; ಶ್ರೀ ಮಾಸ್ತಿ ಕೃಪಾ ಮನೆ ಪಡು ಮನೆ ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ  ಎಂಬವರ ದೂರಿನಂತೆ ಪಿರ್ಯಾದಿದಾರರು ಹಾಗೂ ಅವರ ಪತ್ನಿ ಪೂರ್ಣಿಮಾ ಮತ್ತು ಸಂಬಂಧಿಕರಾದ ಗಂಗಾಧರವರೊಂದಿಗೆ ದಿನಾಂಕ: 17-01-2022 ರಂದು ರಾತ್ರಿ 8.45 ಗಂಟೆಯ ಸಮಯಕ್ಕೆ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು 4.00 ಗಂಟೆಯ ಸಮಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ 4.45 ಗಂಟೆಯ ಸಮಯಕ್ಕೆ ಆಟೋ ರಿಕ್ಷಾದಲ್ಲಿ ನೇತ್ರಾವತಿ ಹೊಳೆಗೆ ಸ್ನಾನಕ್ಕೆ ಹೋದ ಸಮಯ ಚಿನ್ನಾಭರಣ ಹಾಗೂ ಮೊಬೈಲ್ ಗಳನ್ನು ಪಿರ್ಯಾದಿದಾರರ ಪತ್ನಿಯ ವ್ಯಾನಿಟಿ ಬ್ಯಾಗ್ ನಲ್ಲಿರಿಸಿ ಸ್ನಾನಕ್ಕೆ ಹೋಗಿ ವಾಪಾಸ್ಸು 5.00 ಗಂಟೆಯ ಸಮಯಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 476000/- ಹಾಗೂ ಕಳವಾದ ಮೊಬೈಲ್ ನ ಅಂದಾಜು ಮೌಲ್ಯ ರೂ 4.000/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 08/2022  ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶರ್ಮಿಳಾ ಬುರಾಲು ಮನೆ,ಕೊಯಿಲಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು  ಪಿರ್ಯಾದುದಾರರು ಸುಮಾರು 15 ವರ್ಷಗಳ ಹಿಂದೆ ಮದುವೆ  ಆಗಿದ್ದು  ಇವರಿಗೆ ಮಕ್ಕಳಾಗಿರುವುದಿಲ್ಲ. ಇದರಿಂದ ಪಿರ್ಯಾದುದಾರರ  ಗಂಡ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ಅಂತೆಯೆ ದಿನಾಂಕ  17.01.2022 ರಂದು ಸಾಯಂಕಾಲ ಪಿರ್ಯಾದುದಾರರ ಗಂಡ ಮೋಹನ ಪೂಜಾರಿ ರವರು ಕೂಲಿ ಕೆಲಸ ಮುಗಿಸಿ ಮನೆಗೆ  ಬಂದಿದ್ದು ಸಮಯ ಸುಮಾರು 09.00 ಗಂಟೆಗೆ  ಪಿರ್ಯಾದುದಾರರು  ಅಡುಗೆ ಕೊಣೆಯಲ್ಲಿ ಕೆಲಸ ಮಾಡುತ್ತಿದ್ದು  ಮೋಹನ ಪೂಜಾರಿಯವರು  ಯಾರಿಗೂ ಹೇಳದೆ ಮನೆಯಿಂದ ಹೋಗಿರುತ್ತಾರೆ. ಮರುದಿನ  ಮೋಹನ ಪೂಜಾರಿಯವರು ಬರದೆ ಇದ್ದು ಪಿರ್ಯಾದುಧಾರರು  ಮನೆಯ ಹತ್ತಿರದ ಸಂಬಂದಿ ಸೀತಾ ಪೂಜಾರಿ, ಸನತ್ ಪೂಜಾರಿ ಹಾಗೂ ಇತರರಿಗೆ ವಿಚಾರವನ್ನು ತಿಳಿಸಿದ್ದು  ಅವರು ಬಂದು ಹುಡುಕಾಡಿದಲ್ಲಿ ದಿನಾಂಕ 18.1.2022 ರಂದು  ಸುಮಾರು 08.30 ಗಂಟೆಗೆ  ಪಿರ್ಯಾದುದಾರರ ಮನೆಯಿಂದ  ಸುಮಾರು 100 ಮೀಟರ್ ದೂರದಲ್ಲಿರುವ ಆಲ್ಪೋನ್ಸ್ ರವರ ರಬ್ಬರ್ ತೋಟದ ಮದ್ಯದಲ್ಲಿರುವ  ಬಾವಿಯ ಪಕ್ಕ ಚಪ್ಪಲಿ, ಮೊಬೈಲ್ ಮತ್ತು ಟಾರ್ಚ್  ಇದ್ದು  ಅನುಮಾನಗೊಂಡು ಬಾವಿಯಲ್ಲಿ ಹುಡುಕಾಡಿದಲ್ಲಿ ಮೃತ ದೇಹ ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 05-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-01-2022 10:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080