ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಕುಂಞಿ, ಪ್ರಾಯ 39 ವರ್ಷ ತಂದೆ: ಆದಂ ಕುಂಞಿ, ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು           ರವರು ನೀಡಿದ ದೂರೇನೆಂದರೆ ದಿನಾಂಕ 21-02-2021 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ ಮಸೀದಿ ಬಳಿ ಹಾರೀಸ್‌ ಕಾಂಪ್ಲೆಕ್ಸ್‌ ಎದುರು ಹಾದು ಹೋಗುವ ಮಾಣಿ ಮೈಸೂರು ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ KA19AB0730 ಮಾರುತಿ ಓಮ್ನಿ ಆಂಬುಲೆನ್ಸ್‌ ವಾಹನವನ್ನು ಅದರ ಚಾಲಕನು ಅಪ್ರೀಜ್‌ ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಗೆ ಬ್ರೇಕ್‌ ಹಾಕಿದ ಪರಿಣಾಮ ಮಳೆ ಬರುತ್ತಿದ್ದುದ್ದರಿಂದ ಓಮ್ನಿ ಕಾರು ಆತನ ಬಲಬದಿಗೆ ತಿರುಗಿ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ KA21B3301 ನೇ ಆಟೋ ರಿಕ್ಷಾಕ್ಕೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಆಟೋ ರಿಕ್ಷಾ ಚಾಲಕ ಜಲೀಲ್‌ ಗೆ ಹಣೆಗೆ, ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದಲ್ಲದೇ ರಿಕ್ಷಾದಲ್ಲಿದ್ದ ಪ್ರಯಾಣಿಕರೋರ್ವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಟೋ ರಿಕ್ಷಾ ಹಾಗೂ ಆಂಬುಲೆನ್ಸ್‌ ವಾಹನ ಜಖಂ ಗೊಂಡಿದ್ದು, ಆಟೋ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಚಾಲಕ ಜಲೀಲ್‌ ನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಠಾಣಾ ಅ.ಕ್ರ 15/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ತಿಮ್ಮಪ್ಪ ಗೌಡ ಪ್ರಾಯ 45 ವರ್ಷ, ತಂದೆ: ದಿ||ಪದ್ಮ ಗೌಡ,  ವಾಸ: ಕೊಲ್ಯ ಮನೆ, ಕೊಯಿಲ ಅಂಚೆ & ಗ್ರಾಮ, ಕಡಬ ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 21-02-2021 ರಂದು ಆರೋಪಿ ಕಾರು ಚಾಲಕ ಎಂಬವರು KA.19.MC.9834 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ತಿಮ್ಮಪ್ಪ ಗೌಡರವರು ಸವಾರರಾಗಿ, ಅವರ ಅಕ್ಕ ಪೊನ್ನಕ್ಕ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಕೊಯಿಲ ಕಡೆಗೆ ಚಲಾಯಿಸಿಕೊಂಡು ಹೊಗಿ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಹೆದ್ದಾರಿಯಲ್ಲಿ ಹೊಗುತ್ತಿದ್ದ ವಾಹನಗಳನ್ನು ಗಮನಿಸಿ ಬಲಬದಿ ಉಪ್ಪಿನಂಗಡಿ ಕಡೆಗೆ ಹೊಗುವ ಸಮಯ KA.21.V.4224ನೇ ನೋಂದಣಿ ನಂಬ್ರದ ಸ್ಕೂಟರಗೆ ಹಿಂದಿನಿಂದ ಡಿಕ್ಕಿ ಹೊಡೆದು, ಪಿರ್ಯಾದುದಾರರು ಮತ್ತು ಸಹಸವಾರೆಯವರು ಸ್ಕೂಟರ್‌ ಸಮೆತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಪಾದ, ಎಡಕಾಲಿನ ಕೊಲು ಕಾಲು, ಎಡ ಕೈಯ ತೋರು ಬೆರಳಿಗೆ ರಕ್ತಗಾಯ, ಸಹ ಸವಾರೆ ಪೊನ್ನಕ್ಕರವರಿಗೆ ಎಡಕಾಲಿನ ಕೊಲು ಕಾಲು ಮತ್ತು ಹಣೆಗೆ ರಕ್ತಗಾಯಗಳಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  37/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಿರಣ್ ಕುಮಾರ್ ಪ್ರಾಯ 41 ವರ್ಷ ತಂದೆ: ಬಿ ರಾಮಣ್ಣ  ಶೆಟ್ಟಿ ವಾಸ: ಪುಷ್ಪಸದನ ಮನೆ, ಜೈನ್ ಪೇಟೆ, ಬೆಳ್ತಂಗಡಿ ಕಸಬ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ: 20-02-2021 ರಂದು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಎಂ. ಜಿ ಟ್ರೇಡರ್ಸ್ ಬಳಿ ಪಾದಾಚಾರಿ ಚಂದ್ರ ಮೋಹನ್ ರೈ ರವರು ರಸ್ತೆ ದಾಟುತ್ತಿರುವಾಗ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 19 ಇ ಪಿ 7328  ನೇ ಮೋಟಾರು ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಚಂದ್ರ ಮೋಹನ್ ರೈ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಚಂದ್ರ ಮೋಹನ್ ರೈ ರವರು ಅಲ್ಲಿಯೇ ರಸ್ತೆಗೆ ಬಿದ್ದುದಲ್ಲದೇ  ಮೋಟಾರು ಸೈಕಲ್ ಸವಾರ ಪ್ರವೀಣ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಚಂದ್ರ ಮೋಹನ್ ರೈ ರವರು ತಲೆಗೆ ತೀವ್ರ ರಕ್ತ ಗಾಯ ಹಾಗೂ ಪ್ರವೀಣ್ ರವರು ಎಡ ಕಾಲಿನ ಮೊಣಗಂಟಿಗೆ, ಪಾದಕ್ಕೆ ಗುದ್ದಿದ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಈ ಪೈಕಿ ತೀವ್ರ ಗಾಯಗೊಂಡ ಚಂದ್ರ ಮೋಹನ್ ರೈ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಿದ್ದು ಇಲ್ಲಿನ ವೈದ್ಯರು ಪರೀಕ್ಷಿಸಿ ಚಂದ್ರಮೋಹನ್ ರೈ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 09/2021, ಕಲಂ; 279, 337, 304(ಎ) ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿಜಯ ಪ್ರಾಯ 42 ವರ್ಷ ತಂದೆ: ಕಾಂತಪ್ಪ ಪೂಜಾರಿ ವಾಸ: ಮೊಂಟಪಾಲಿ ಮನೆ, ಸಂಬೂರು ಗ್ರಾಮದ ಮತ್ತು ಅಂಚೆ, ಬಂಟ್ವಾಳ ತಾಲೂಕುರವರು ದಿನಾಂಕ: 21-02-2021 ರಂದು ತನ್ನ ಬಾಬ್ತು ಕೆಎ 19 ಎಂ ಎಫ್ 9152 ನೇ ಓಮ್ನಿ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಪತ್ನಿ ಮಮಿತಾ, ಅತ್ತೆ ಗುಲಾಬಿ ಎಂಬವರನ್ನು ಕುಳ್ಳಿರಿಸಿಕೊಂಡು ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ತಲೆಕ್ಕಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಕೆಎ 70 ಹೆಚ್ 0757 ನೇ ಮೋಟಾರು ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಗುದ್ದಿದ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 10/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಧೀರ್, ಪ್ರಾಯ: 22 ವರ್ಷ, ತಂದೆ: ನಾರಾಯಣ, ವಾಸ: ಶಿವ ಪ್ರಸಾದ್ ನಿಲಯ,  ಊರ್ಜೆ, ದಿಡುಪೆ ಮಲವಂತಿಗೆ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 20-02-2021 ರಂದು ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ  ಶಿರಾಡಿ ದೇವಸ್ಥಾನದ ಕ್ರಾಸ್ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಆರೋಪಿ ದಿನೇಶ್ ಎಂಬಾತನು ಪಿರ್ಯಾದಿದಾರರನ್ನು ತಡೆದು ಅಡ್ಡ ಕಟ್ಟಿ ನಿಲ್ಲಿಸಿದ ಕೂಡಲೇ ಒಂದು ವಾಹನದಲ್ಲಿ  ಉಮೇಶ್ ಮತ್ತು ಚೆನ್ನನ್ನ ಎಂಬವರು ಅಲ್ಲಿಗೆ ಬಂದು ಚೆನ್ನನ್ನ ಎಂಬವರು ದೊಣ್ಣೆಯಲ್ಲಿ  ಪಿರ್ಯಾದಿದಾರರ ತಲೆಗೆ ಹೊಡೆದು ರಕ್ತ ಗಾಯ ವನ್ನುಂಟು ಮಾಡಿದ್ದಲ್ಲದೇ ಆರೋಪಿಗಳೆಲ್ಲರೂ ಪಿರ್ಯಾದಿ ದಾರರಿಗೆ “ವಿವಾದಿತ ಸ್ಥಳದ ವೀಡಿಯೋ ಮಾಡುತ್ತಿಯಾ ನಿನಗೆ ಭಾರಿ ಅಹಂಕಾರ ಇದೆ” ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹಲ್ಲೆ ಮಾಡಿದ್ದಲ್ಲದೇ ಉಮೇಶ್ ಎಂಬಾತನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿದೆ ಆರೋಪಿಗಳು ಹಾಗೂ ಪಿರ್ಯಾದಿದಾರರಿಗೆ  ದಾರಿಯ ವಿಚಾರದಲ್ಲಿ ವಿವಾದವಿದ್ದು, ಸದ್ರಿ ಘಟನೆಗೆ ಇದೇ ವಿಚಾರ ಕಾರಣವಾಗಿರುತ್ತದೆ  ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 19/2021 ಕಲಂ:341,323,324,504,506  ಜೊತೆಗೆ  34 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-02-2021 11:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080