ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಿಜ್ವಾನ್, 25 ವರ್ಷ ತಂದೆ: ಆದಂ ವಾಸ: ಮಾವಿನಕಟ್ಟೆ ಮನೆ, ಮಣಿನಾಲ್ಕೂರು ಗ್ರಾಮ, ಬಂಟ್ವಾಳ ತಾಲೂಕು  ರವರು ದಿನಾಂಕ 21-08-2022 ರಂದು ಅಗತ್ಯ ಕೆಲಸದ ನಿಮಿತ್ತ ಅಂಗರ್ಗಂಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ವಾಪಾಸು ಜೀವನ ಜ್ಯೋತಿ ಖಾಸಗಿ ಬಸ್ಸಿನಲ್ಲಿ ಮಾವಿನಕಟ್ಟೆ ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ  ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ KA-18-A-7189 ನೇ ಜೀವನ್ ಜ್ಯೋತಿ ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಯ್ಷತನದಿಂದ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ನೊಂದಣಿ ಯಾಗದ TVS N-TORQ ನೇ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಹುಸೈನ್ ರವರ ಮುಖಕ್ಕೆ, ಮೂಗಿಗೆ ತರಚಿದ ಗಾಯ ಹಾಗೂ ಎಡಭಾಗ ಎದೆಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 94/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಫಿರ್ಯಾದಿದಾರರು ವೆಂಕಟೇಶ್ ಆಚಾರ್ಯ ಪ್ರಾಯ 35 ವರ್ಷ ತಂದೆ ಶಿವಪ್ಪ ಆಚಾರ್ಯ, ವಾಸ.ಗಾಯತ್ರಿ ನಿಲಯ ಕನಿಪಿಲ ಅಮರಪಡ್ನೂರು ಗ್ರಾಮ ಚೊಕ್ಕಾಡಿ ಸುಳ್ಯ ತಾಲೂಕು ರವರು ಸುಳ್ಯದಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಫಿರ್ಯಾದಿದಾರರ ಅಂಗಡಿಯಲ್ಲಿ ಜಗದೀಶ ಎಂಬುವರು ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 20.08.2022 ರಂದು ಜಗದೀಶನು ಪುತ್ತೂರಿನ ಸಂಬಂಧಿಕರ ಮನೆಗೆ ಹೋಗಿದ್ದು, ಫಿರ್ಯಾದಿದಾರರು ಸ್ವಂತ ಕೆಲಸದ ಬಗ್ಗೆ ಪುತ್ತೂರಿಗೆ ಬಂದು ರಾತ್ರಿ ಸುಳ್ಯಕ್ಕೆ ಹೋಗುವರೇ ತನ್ನ ಕಾರಿನಲ್ಲಿ 7.00 ಗಂಟೆಗೆ ಪುತ್ತೂರಿನಿಂದ ಹೊರಟು ದರ್ಬೆಗೆ ತಲುಪಿದಾಗ ಜಗದೀಶನು ತನ್ನ ಬೈಕಿನಲ್ಲಿ ಬಂದು ಫಿರ್ಯಾದಿದಾರರಲ್ಲಿ ಮಾತನಾಡಿ, ಜಗದೀಶನು ಸುಳ್ಯಕ್ಕೆಂದು ಫಿರ್ಯಾದಿದಾರರ ಮುಂದೆ ಹೊರಟ್ಟಿದ್ದು, ಫಿರ್ಯಾದಿದಾರರು ಕಾರಿನಲ್ಲಿ ಜಗದೀಶನ ಹಿಂದಿನಿಂದ ಹೊರಟು, ಪುತ್ತೂರಿನಿಂದ ಸುಳ್ಯಕ್ಕೆ ಮಾಣಿ-ಮೈಸೂರು ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 7.30 ಗಂಟೆಗೆ ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಳಿ ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರ ಮುಂದಿನಿಂದ ಹೊಗುತ್ತಿದ್ದ ಜಗದೀಶರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಗದೀಶರವರ ಬಲ ಕೈಯ ಕೋಲು ಕೈಯಿಗೆ, ಎಡಕಾಲಿನ ಕೋಲು ಕಾಲಿಗೆ ಮತ್ತು ಮೂಗಿಗೆ ಗುದ್ದಿದ ಗಾಯವಾಗಿದ್ದು, ಈ ಅಪಘಾತ ಪಡಿಸಿದ ಕಾರಿನ ಚಾಲಕನ ಹೆಸರು ಕೇಳಲಾಗಿ ನಿಹಾಲ್ ಎಂಬುದಾಗಿ ತಿಳಿಸಿದ್ದು,ಕಾರಿನ ನಂಬ್ರ ನೋಡಲಾಗಿ KA.19.ML 4245 ಆಗಿರುತ್ತದೆ.ಜಗದೀಶರವರ ಮೋಟಾರ ಸೈಕಲ್ ನಂಬ್ರ ನೋಡಲಾಗಿ KA.21.Y 4371 ಆಗಿರುತ್ತದೆ.ಜಗದೀಶನನ್ನು ಚಿಕಿತ್ಸೆಯ ಬಗ್ಗೆ ಕಾರಿನಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಪ್ರಥಮ ಚಿಕಿತ್ಸೆ ಕೊಡಸಿ ,ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈಧ್ಯರು ಜಗದೀಶನನ್ನು ಪರೀಕ್ಷೀಸಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ : 88/2022  ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 21-08-2022 ರಂದು ಬೆಳ್ಳಾರೆ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರು ಐವರ್ನಾಡು ಗ್ರಾಮದ ಐವರ್ನಾಡು ಜಂಕ್ಷನ್‌ ಬಳಿಯ ಸಾರ್ವಜನಿಕ ಸ್ಥಳವಾದ ಕಣ್ಣ ಎಂಬವರ  ಅಂಗಡಿಯಲ್ಲಿ ಆರೋಪಿತರಾದ  1)ಕಣ್ಣ (61), 2) ಕುಸುಮಾಧರ (32) 3) ಗಂಗಾಧರ (42), 4)ಕೆ ಪಿ ಅಣ್ಣಪ್ಪ (42) ರವರುಗಳು ಮದ್ಯ ಸೇವನೆ ಮಾಡುತ್ತಿದ್ದು, ಅಂಗಡಿಯ ಮಾಲಕ ಕಣ್ಣರವರು ಸಾರ್ವಜನಿಕ ಸ್ಥಳವಾದ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿರುವುದರಿಂದ ಮದ್ಯ ಹಾಗೂ ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಬೆಳ್ಳಾರೆ  ಠಾಣಾ ಆ.ಕ್ರ 68/22 ಕಲಂ 15(ಎ) ಜೊತೆಗೆ 32(3) ಕೆ.ಇ ಆ್ಯಕ್ಟ್. ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೋಸೆಫ್ ಡಿಸೋಜ ಪ್ರಾಯ:73 ವರ್ಷ ತಂದೆ ; ಲಾರೆನ್ಸ್ ಡಿಸೋಜ ವಾಸ;ಬೋಜಾರ ಮನೆ ನಡ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಮ್ಮ ಬೌತೀಶ್  ಡಿಸೋಜ (71) ಎಂಬವರು  ಜೀವನದಲ್ಲಿ ಬೇಸರಗೊಂಡಿದ್ದವರು ದಿನಾಂಕ:21-08-2022 ರಂದು ಬೆಳಿಗ್ಗೆ 7.45 ಗಂಟೆಯಿಂದ 10.00 ಗಂಟೆಯ ಮದ್ಯೆದ ಅವಧಿಯಲ್ಲಿ   ಮನೆಯಲ್ಲಿ ಯಾರು ಇಲ್ಲದ ಸಮಯ ದನದ ಕೊಟ್ಟಿಗೆಗೆ ಹೆಚ್ಚುವರಿಯಾಗಿ ತಯಾರಿಸಿದ ಟಾಟಾ ಶೀಟಿನ ಶೆಟ್ಟಿಗೆ ಅಳವಡಿಸಿರುವ ಕಬ್ಬಿಣದ ಪೈಪಗೆ ನೈಲಾನ್  ಹಗ್ಗವನ್ನು ಸುತ್ತಿ  ಇನ್ನೊಂದು ಬದಿಯಿಂದ ಕುತ್ತಿಗೆಗೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 37/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಿಶಾಂತ್‌ ಪ್ರಾಯ 31 ವರ್ಷ ತಂದೆ:ಶಿವಪ್ಪ ಪೂಜಾರಿ ವಾಸ: ಬೊಳ್ಳೇರಿ ಮನೆ, ತುಂಬೆ ಗ್ರಾಮ ಬಂಟ್ವಾಳ ತಾಲೂಕು ರವರ ತಂದೆಯವರಿಗೆ ಲಿವರ್ ಮತ್ತು ಲಂಗ್ಸ್ ಕಾಯಿಲೆ ಇದ್ದು ಅದಕ್ಕಾಗಿ ತುಂಬೆ ಫಾದರ್ ಮುಲ್ಲಾರ್ ಆಸ್ಪತ್ರೆಯಿಂದ  ಚಿಕಿತ್ಸೆ ಮಾಡುತ್ತಿದ್ದು ಖಾಯಿಲೆ  ಗುಣ ಮುಖರಾಗದೇ ಇದ್ದು, ಈ ಬಗ್ಗೆ ಬೇಸರಗೊಂಡು ಈ ಹಿಂದೆ ಎರಡು ಸಲ ಆತ್ಮ ಹತ್ಯೆ ಮಾಡುತ್ತೇನೆಂದು  ನದಿ ಬಳಿ ಹೋದವರನ್ನು ನೆರೆಯವರು  ಕರೆದುಕೊಂಡು  ಮನೆಗೆ  ಬಿಟ್ಟಿರುತ್ತಾರೆ. ಖಾಯಿಲೆ ಗುಣ ಮುಖರಾಗದ ಬಗ್ಗೆ ಖಿನ್ನತೆಯನ್ನು ಹೊಂದಿದ್ದರು. ದಿನಾಂಕ 21-08-2022 ರಂದು ತಾಯಿ ಸಂಬಂದಿಕರ  ಮನೆಯಾದ ತಲಪಾಡಿ ಎಂಬಲ್ಲಿಗೆ ಹೋಗಿದ್ದು, ಪಿರ್ಯಾದಿದಾರರು ಮತ್ತು ಪತ್ನಿ ಇನ್ನೊಂದು ಸಂಬಂದಿಕರ ಮನೆಯಾದ ಪುತ್ತೂರು ಎಂಬಲ್ಲಿಗೆ ಹೋಗಿದ್ದು ಮನೆಯಲ್ಲಿ ತಂದೆ ಮಾತ್ರ ಇದ್ದರು. ಸಂಜೆ ಸಮಯ 3.15 ಗಂಟೆಗೆ  ಮನೆಗೆ ಬಂದಾಗ ಮನೆಯ ಬಾಗಿಲು  ಹಾಕಿದ್ದು ಆದರೆ ಬೀಗ ಹಾಕಿರುವುದಿಲ್ಲ.  ಅಷ್ಟು  ಹೊತ್ತಿಗೆ  ತಾಯಿ ಕೂಡ ಬಂದಿದ್ದು  ಮನೆಯ ಒಳಗೆ ಹೋಗಿ ನೋಡಿದಾಗ ತಂದೆ ಮನೆಯಲ್ಲಿ ಇಲ್ಲದೇ  ಇದ್ದು ಹುಡುಕಾಡಿದಲ್ಲಿ ಮನೆಯ ಹೊರಗಡೆ ಕುಳಿತುಕೊಳ್ಳುವರೇ  ಇಡುತ್ತಿದ್ದ ಪೈಬರ್  ಚಯರ್  ಮನೆಯ ಎದುರು ಬಾವಿಯ ಪಕ್ಕ ಇದ್ದು  ಸಂಶಯಗೊಂಡು ಬಾವಿಯ ಬಳಿ  ಹೋದಾಗ  ಬಾವಿಗೆ ನೀರು ಸೇದುವರೇ ಹಾಕಿದ್ದ ಕಬ್ಬಿಣದ ರಾಡಿಗೆ  ನೈಲಾನ್ ಹಗ್ಗವನ್ನು ಕಟ್ಟಿ   ಅದರ ಇನ್ನೊಂದು ತುದಿಯನ್ನು  ಕುತ್ತಿಗೆಗೆ  ಕಟ್ಟಿ  ನೇಣು ಬಿಗಿದುಕೊಂಡಿದ್ದು ತಂದೆಯ ಮೃತ ದೇಹ ಬಾವಿಯೊಳಗೆ ನೇತಾಡಿಕೊಂಡಿದ್ದನ್ನು ಹೊರತೆಗೆದು ಮೃತ  ದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ  ಸಾಗಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ   ಯುಡಿಆರ್ ನಂಬ್ರ 40/2020 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಿರಣ್ ಎಂ (32) ತಂದೆ: ಶೇಷಪ್ಪ ಗೌಡ ವಾಸ: ಮುಳ್ಯ, ಅಟ್ಲೂರು ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರ ತಂದೆ ಶೇಷಪ್ಪ ಗೌಡ (55) ಎಂಬವರು ದಿನಾಂಕ 21.08.2022 ರಂದು ಮದ್ಯಪಾನ ಮಾಡಿ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಎಂಬಲ್ಲಿರುವ ಮನೆಯ ಹಾಲ್ ನಲ್ಲಿ ಸಮಯ ಸುಮಾರು 15:00 ಗಂಟೆಗೆ ವಾಂತಿ ಮಾಡುತ್ತಿದ್ದವರನ್ನು ಪಿರ್ಯಾದುದಾರರು ಕಂಡು ತಮ್ಮ ಬಾಬ್ತು ಕ್ಯಾಬ್ ವಾಹನದಲ್ಲಿ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಶೇಷಪ್ಪ ಗೌಡರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಶೇಷಪ್ಪ ಗೌಡರು ವಿಪರೀತ ಮದ್ಯಪಾನ ಸೇವನೆ ಮಾಡುತ್ತಿದ್ದರಿಂದ ವೈಯಕ್ತಿಕವಾಗಿ ಮನನೊಂದು ಯಾವುದೋ ವಿಷ ಪಧಾರ್ಥವನ್ನು ಸೇವನೆ ಮಾಡಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 36/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 22-08-2022 01:38 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080