ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹರೀಶ ಕೆ ಪ್ರಾಯ 35 ವರ್ಷ ತಂದೆ:ವಾಸು ಸಫಲ್ಯ ಕೋಲ್ಪೆಮನೆ ಇಡ್ಕಿದು ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ: 23-08-2022 ರಂದು ಮಧ್ಯಾಹ್ನ ಸಮಯ ಊಟಕ್ಕೆಂದು ಮನೆಗೆ ಬರುತ್ತಿರುವಾಗ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ, ಮಿತ್ತೂರು ರೈಲ್ವೆ ಬಿಡ್ಜ್ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿಯ ಅಣ್ಣ ಗಿರೀಶ್ ರ ಬಾಬ್ತು  ಟಿವಿಎಸ್  ಜುಪಿಟರ್  KA-19-ET-7345 ನೇಯದರಲ್ಲಿ ರಸ್ತೆಯ ಎಡ ಬದಿಯಲ್ಲಿ ಪಿರ್ಯಾಧಿಯ ತಂದೆಯನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮನೆಗೆ ಹೋಗುವರೇ ರಸ್ತೆ ಕ್ರಾಸ್ ಮಾಡಲು ಬದಿಯಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ KA-19-AA-6912ನೇ ಮಾರುತಿ ಶಿಪ್ಟ್ ಡಿಝೈಯರ್ ಕಾರನ್ನು ಅದರ ಚಾಲಕ ರಾಮನಾಥರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಒಂದು ಕಾರನ್ನು ಒವರಟೇಕ್ ಮಾಡಿ ಸ್ಕೂಟರ್ ಗೆ  ಡಿಕ್ಕಿ ಹೊಡೆಯಿತು, ಪರಿಣಾಮವಾಗಿ, ಸ್ಕೂಟರ್ ಸಮೇತ ಸವಾರ ಮತ್ತು ಸಹ ಸವಾರರು ಡಾಮಾರು ರಸ್ತೆಗೆ ಬಿದ್ದರು, ಇದನ್ನು ನೋಡಿದ ಪಿರ್ಯಾಧಿ ಮತ್ತು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಜನರು ಅಪಘಾತವಾಗಿ ಬಿದ್ದಲ್ಲಿಗೆ ಹೋಗಿ ಆರೈಕೆ ಮಾಡಿ ನೋಡಲಾಗಿ , ಸಹ ಸವಾರರಾಗಿದ್ದ ಪಿರ್ಯಾಧಿಯ ತಂದೆಗೆ ಗಲ್ಲಕ್ಕೆ, ಹಣೆಗೆ, ಎಡ ಹಾಗು ಬಲ ಕಣ್ಣಿಗೆ, ಮೂಗಿಗೆ, ಎಡ ಕೈಗೆ ಎಡ ಕಾಲಿಗೆ ರಕ್ತ ಗಾಯ ಆಗಿತ್ತು, ಸವಾರ ಗಿರೀಶನಿಗೆ ಅಲ್ಲಲ್ಲಿ ಗುದ್ದಿದ ನಮೂನೆಯ ನೋವು ಆಗಿತ್ತು, ಸ್ಕೂಟರ್ ಮತ್ತು ಕಾರು ಜಖಂ ಅಗಿತ್ತು. ಗಾಯಾಳುಗಳನ್ನು ಸ್ಥಳದಲ್ಲಿದ್ದ ಪುರುಷೋತ್ತಮರವರ ಒಂದು ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ ಹೇಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈಧ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 135/2022 ಕಲಂ:279.337.ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿದ್ಯಾನಂದ (42) ತಂದೆಮಾಯಿಲಪ್ಪ ಪೂಜಾರಿ ವಾಸ:ಅಂಗಡಿಬೆಟ್ಟು ಮನೆ, ತೆಂಕಕಾರಂದೂರು ಗ್ರಾಮ, ಬೆಳ್ತಂಗಡಿ ತಾಲೂಕು   ರವರು ನೀಡಿದ ದೂರಿನಂತೆ ದಿನಾಂಕ 23-08-2022 ರಂದು  ರಾತ್ರಿ  ಸುಮಾರು 07:30 ಗಂಟೆಯಿಂದ   ದಿನಾಂಕ:24-08-2022 ರಂದು  ಬೆಳಿಗ್ಗೆ  07:45  ಗಂಟೆಯ  ಮದ್ಯ  ಅವಧಿಯಲ್ಲಿ  ಯಾರೋ  ಕಳ್ಳರು  ಬೆಳ್ತಂಗಡಿ ತಾಲೂಕು  ತೆಂಕಕಾರಂದೂರು  ಗ್ರಾಮದ   ತೆಂಕಕಾರಂದೂರು  ಶ್ರೀ  ವಿಷ್ಟು   ಮೂರ್ತಿ  ದೇವಸ್ಥಾನದ   ಹಿಂಬಾದಿ ಬಾಗಿಲಿನ  ಬೀಗವನ್ನು  ಬಲತ್ಕಾರವಾಗಿ  ತೆಗೆದು  ದೇವಸ್ಥಾನದ  ಗರ್ಭ ಗುಡಿ,   ಗಣಪತಿ ದೇವರ  ಗುಡಿ, ದೈವಸ್ಥಾನದ ಕೊಠಡಿ, ಉಗ್ರಾಣ, ಕಛೇರಿ  ಕೊಠಡಿಗಳ  ಬೀಗಗಳನ್ನು  ಮುರಿದು  ದೇವಸ್ಥಾನದಲ್ಲಿದ್ದ  4 ಕಾಣಿಕೆ  ಡಬ್ಬಗಳ   ಬೀಗವನನ್ನು ಮುರಿದು  ಅದರಲ್ಲಿ ಕಳೆದ ಒಂದು ವಾರದಿಂದ ಭಕ್ತರಿಂದ ಸಂಗ್ರಹವಾದ  ಸುಮಾರು ರೂ 400/-  ಮತ್ತು  ಕಛೇರಿಯಲ್ಲಿದ್ದ  ಸಿಸಿ  ಕ್ಯಾಮರ, ಮಾನಿಟರ್, ಡಿವಿಆರ್, ಪವರ್ ಬಾಕ್ಸ್ಗಳನ್ನು  ಕಳವು  ಮಾಡಿಕೊಂಡು  ಹೋಗಿದ್ದು  ಕಳವು ಆದ  ನಗದು   ಸೇರಿ  ಒಟ್ಟು ಅಂದಾಜು ಮೌಲ್ಯ ರೂ 7400/   ಆಗಬಹುದು   ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 50-2022 ಕಲಂ:457, 380 ಐಪಿಸಿ  . ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲ್ಯಾನ್ಸಿ ರೋಡ್ರಿಗಸ್ ತಂದೆ ಲೇ||ಫೆಡ್ರಿಕ್ ರೋಡ್ರಿಗಸ್ ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ರವರು ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಪಿರ್ಯಾದಿದಾರರ ಪೈಕಿ ಅಣ್ಣ ಹೆನ್ರಿ ರಾಡ್ರಿಗಸ್ ನು ಮದುವೆಯಾಗಿರುವುದಿಲ್ಲ. ಆತನು  ಕೂಲಿ ಕೆಲಸ ಮಾಡಿಕೊಂಡಿದ್ದು ಅಮ್ಮುಂಜೆ  ಗ್ರಾಮದ ಬೆಂಜನಪದವು ಎಂಬಲ್ಲಿ ಪಿರ್ಯಾದಿದಾರರ  ಸ್ನೇಹಿತ ಮಹೇಶನ ಬಾಬ್ತು ಒಂದು ರೂಮಿನಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದು ದಿನಾಂಕ 23.08.2022 ರಂದುಬಂದು  ನಂತರ ಅಲ್ಲಿಂದ ಹೋಗಿದ್ದು,  ದಿನಾಂಕ 24.08.2022 ರಂದು ಮಹೇಶನು ಬೆಳಿಗ್ಗೆ ಸುಮಾರು 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಣ್ಣ ಹೆನ್ರಿ ರೋಡ್ರಿಗಸ್  ಗೆ ಫೋನ್ ಮಾಡಿದಾಗ ಅಣ್ಣ ಫೋನ್ ರಿಸೀವ್ ಮಾಡದೆ ಇದ್ದುದರಿಂದ ಆತನು ವಾಸ ಮಾಡಿಕೊಂಡಿರುವ ರೂಮಿಗೆ ಹೋದನು. ಅಲ್ಲಿ ನೋಡಲಾಗಿ ಅಣ್ಣ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಮೃತಪಟ್ಟಿರುವುದನ್ನು ನೋಡಿ ಪಿರ್ಯಾದುದಾರರಿಗೆ ತಿಳಿಸಿದ್ದು,  ಪಿರ್ಯಾದಿದಾರರು  ಹೋಗಿ ನೋಡಿದಾಗ ಅಣ್ಣ ಮೃತಪಟ್ಟಿರುವುದು ಕಂಡು ಬಂತು. ಅಣ್ಣನು ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 23.08.2022 ರಂದು ಸಂಜೆ 3.00 ಗಂಟೆಯಿಂದ ದಿನಾಂಕ 24.08.2022 ರಂದು ಬೆಳಿಗ್ಗೆ 10.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 41-2022  ಕಲಂ 174  ಸಿ ಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಉಮಾವತಿ, ಪ್ರಾಯ: 38 ವರ್ಷ ಗಂಡ: ಬಾಲಕೃಷ್ಣ ಗೌಡ ವಾಸ: ಕೊಡೆಂಚಿ ಬರೆಮೇಲು, ರೆಖ್ಯಾ ಗ್ರಾಮ ಬೆಳ್ತಂಗಡಿ ತಾಲೂಕು ರವರ ಗಂಡ  ಬಾಲಕೃಷ್ಣ ಗೌಡ ಎಂಬವರು ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಮನೆಯಲ್ಲಿ ಹೇಳುತ್ತಿದ್ದರು. ಪಿರ್ಯಾದಿದಾರರು ಹಾಗೂ ಮಕ್ಕಳು  ಊಟ ಮಾಡಿದ ನಂತರ ರಾತ್ರಿ 9.00 ಗಂಟೆಗೆ ಮಲಗಿದ್ದ ಸಮಯ ಗಂಡನವರು ಮನೆಯ ಬಚ್ಚಲು ಕೋಣೆಯಿಂದ ಬೊಬ್ಬೆ ಹೊಡೆಯುವ ಶಬ್ದ ಕೇಳಿ ಪಿರ್ಯಾದುದಾರರು ಮತ್ತು ಮಗ ಪ್ರಜ್ಞೇಶ್ ನು ಮನೆಯ ಬಚ್ಚಲು ಕೋಣೆಗೆ ಬಳಿಗೆ ಓಡಿ ಹೋಗಿ ನೋಡಿದಾಗ ಪಿರ್ಯಾದಿದಾರರ ಗಂಡ ಕೆಳಗೆ ಬಿದ್ದು ಒದ್ದಾಡುತ್ತಿದ್ದು ಅವರ ಪಕ್ಕದಲ್ಲಿಯೇ ರಬ್ಬರ್ ಶೀಟ್ ತೆಗೆಯಲು ಮಿಶ್ರಣ ಮಾಡುವ ಆ್ಯಸಿಡ್ ನ ಕ್ಯಾನ್ ಬಿದ್ದುಕೊಂಡಿರುತ್ತದೆ. ಪಿರ್ಯಾದಿದಾರರ ಗಂಡನ ಬಾಯಿಯಿಂದ  ಆ್ಯಸಿಡ್ ನ ವಾಸನೆ ಬರುತ್ತಿರುವುದನ್ನು ಕಂಡು ಜೀಪಿನಲ್ಲಿ ನೆಲ್ಯಾಡಿಯವರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಬತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ ಒಳರೋಗಿ ದಾಖಲಿಸಿ ಚಿಕಿತ್ಸೆಯಲ್ಲಿರುವಾಗಲೇ ದಿನಾಂಕ:24-08-2022 ರಂದು ಪಿರ್ಯಾದಿದಾರರ ಗಂಡರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 47-2022  ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್‌ ಠಾಣೆ : ಪಿರ್ಯಾದಿದಾರರಾದ ಶ್ರೀ ವರದರಾಜು ಪ್ರಾಯ 30 ವರ್ಷ,ತಂದೆ: ಜವರಯ್ಯ  ಅರಕೆರೆಮನೆ,ದೇವಲಾಫುರ ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ  ರವರ ತಮ್ಮ ಸ್ವಾಮಿ ದಿನಾಂಕ  18-08-2022 ರಂದು ದೂರವಾಣಿ ಕರೆ ಮಾಡಿ ನಾವು ಗೆಳೆಯರ ಜೊತೆ   ದರ್ಮಸ್ಥಳ ಶೃಂಗೇರಿ,  ಕೊಲ್ಲೂರು  ಸುಬ್ರಹ್ಮಣ್ಯ ಕಡೆ  ದೇವರ ದರ್ಶನಕ್ಕೆ ಪ್ರವಾಸ ಹೋಗುವುದಾಗಿ ತಿಳಿಸಿದ್ದನು.  ದಿನಾಂಕ 21-08-2022 ರಂದು  ತಮ್ಮ ಸ್ಮಾಮಿಯ ಜೊತೆ ಪ್ರವಾಸ ಹೋದ  ಪರಿಚಯದ  ರವಿಕುಮಾರ್ ಎಂಬವರು ದೂರವಾಣಿ  ಕರೆ ಮಾಡಿ  ನಾವು ಎಲ್ಲಾ ಕಡೆ ದೇವರ ದರ್ಶನ ಮಾಡಿ  ಸುಬ್ರಹ್ಮಣ್ಯಕ್ಕೆ ಬಂದು  ದೇವರ ದರ್ಶನ ಪಡೆದು  ಕುಮಾರಧಾರ ಹೊಳೆಯಲ್ಲಿ  ಸ್ನಾನ ಮಾಡುತ್ತಿದ್ದಾಗ  ಸ್ವಾಮಿಯು  ನೀರಿನಲ್ಲಿ ಸ್ನಾನಕ್ಕಿಳಿದವನು  ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ  ನದಿ ಕೆಳ ಬಾಗಕ್ಕೆ ಹೋಗಿ ಕಾಣೆಯಾಗಿರುತ್ತಾನೆ. ಎಂದು ತಿಳಿಸಿರುತ್ತಾರೆ.  ಅಲ್ಲದೇ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದರು.  ಕೂಡಲೇ ಊರಿನಿಂದ  ಗೆಳೆಯರೊಂದಿಗೆ ಬಂದಿದ್ದು  ಸುಬ್ರಹ್ಮಣ್ಯದಲ್ಲಿ  ಸ್ಥಳಿಯರ ಸಹಕಾರದೊಂದಿಗೆ  ಕುಮಾರಧಾರ ಹೊಳೆಯಲ್ಲಿ ಹುಡುಕಾಡಿದಲ್ಲಿ  ದಿನಾಂಕ 24-08-2022 ರಂದು ಕುಮಾರಾಧರ ಹೊಳೆಯ ನೀರಿನಲ್ಲಿ  ತಮ್ಮ ಸ್ವಾಮಿಯ ಮೃತ ದೇಹ ಪತ್ತೆಯಾಗಿರುತ್ತದೆ. ತಮ್ಮ ಸ್ವಾಮಿ ಸ್ನಾನಕ್ಕೆಂದು ನದಿಯ ನೀರಿಗೆ ಇಳಿದವನು ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಮೃತಪಟ್ಟಿರುವುದಾಗಿದೆ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ  ಯುಡಿಆರ್‌ ನಂಬ್ರ 16/2022 ಕಲಂ: 174 ಸಿಆರ್‌‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 25-08-2022 11:01 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080