ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಆಯಿಷಾ  ಪ್ರಾಯ : 39 ವರ್ಷಗಂಡ: ದಿ|| ಖಲಂದರ್ವಾಸ: ನಲ್ಲಿಗುಡ್ಡೆ ಮನೆ,  ವಿಟ್ಲ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರ ದೂರಿನಂತೆ ದಿನಾಂಕ : 26-08-2021 ರಂದು ತನ್ನ ತಮ್ಮ ಅಬ್ದುಲ್  ಖಾದರ್ ರೊಂದಿಗೆ  KA -20 -AA -7354 ನೇ  ಫಲ್ಗುಣಿ ಬಸ್ಸಿನಲ್ಲಿ  ಮಂಗಳೂರಿನಿಂದ ವಿಟ್ಲಕ್ಕೆ  ಪ್ರಯಾಣಿಸುತ್ತಾ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ  ಬಂಟ್ವಾಳ ತಾಲೂಕು  ಬಿ ಮೂಡ ಗ್ರಾಮದ ಮಿತ್ತಬೈಲು ಎಂಬಲ್ಲಿಗೆ ತಲುಪಿದಾಗ ಬಸ್ಸನ್ನು ಅದರ ಚಾಲಕ ನಾರಾಯಣರವರು  ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಸ್ಸಿನ ಎದುರಿನಿಂದ ಬಿ ಸಿ ರೋಡ್ ಕಡೆ ಹೋಗುತ್ತಿದ್ದ KA-19-AC-2528 ನೇ ಟೆಂಪೊವನ್ನು ಓವರ್ ಟೇಕ್ ಮಾಡಿ ಅದರ ಬಲಬದಿಗೆ  ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು. ಪರಿಣಾಮ ಬಸ್ಸಿನ ಎಡಬದಿಯ ಹಿಂಬದಿ ಸೀಟ್ ನಲ್ಲಿ ಕುಳಿತಿದ್ದ ಪಿರ್ಯಾದಿದಾರರ ಎಡ ಕೈಗೆ ಜಜ್ಜಿದ ರಕ್ತಗಾಯ , ಹಾಗೂ ಮೈಕೈಗೆ ಗುದ್ದಿದ ಗಾಯವಾಗಿದ್ದು.  ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 82/2021  ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ದಿನಾಂಕ 26-08-2021 ರಂದು 18-20 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಮನೋಜ್‌ ಹೆಚ್‌ ಎಂಬವರು KA-21-U-7620ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಹರೂನಗರ ಕಡೆಯಿಂದ ಮಂಜಲ್ಪಡ್ಪು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಟೊಟಲ್‌ ಗ್ಯಾಸ್‌ ಪಂಪ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ಸಿ.ಎನ್‌. ವಿನ್ಯಾಸ್‌, ಪ್ರಾಯ 26 ವರ್ಷ, ತಂದೆ: ಸಿ.ಹೆಚ್‌. ಸದಾನಂದ, ವಾಸ:  ಮಾಧವ ನಾಯಕ್‌  ಕೌಂಪೌಂಡ್‌, ಮಂಜಲ್ಪಡ್ಪು, ನೆಹರೂ ನಗರ, ಕಬಕ  ಗ್ರಾಮ, ಪುತ್ತೂರು ತಾಲೂಕು ರವರು ಅವರ ತಾಯಿ ಶಶಿಕಲಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನೆಹರೂನಗರ ಕಡೆಯಿಂದ ಮಂಜಲ್ಪಡ್ಪು ಕಡೆಗೆ ಚಲಾಯಿಸಿಕೊಂಡು ಹೋಗಿ ಬಲಭಾಗದಲ್ಲಿರುವ ಒಳ ರಸ್ತೆಗೆ ಹೋಗಲು ಇಂಡಿಕೇಟರ್‌ ಹಾಕಿ ನಿಧಾನವಾಗಿ ಬಲಬಾಗಕ್ಕೆ ತಿರುಗಿಸುತ್ತಿದ್ದ KA-21-Y-4050ನೇ ನಂಬ್ರದ ಸ್ಕೂಟರಿಗೆ ಹಿಂದಿನಿಂದ ಅಪಘಾತವಾಗಿ, ಎರಡೂ ವಾಹನಗಳ ಸಮೇತ ಅದರಲ್ಲಿದ್ದವರು ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿಗೆ ತರಚಿದ ಗುದ್ದಿದ ಗಾಯಗಳಾಗಿ ಪತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಶಶಿಕಲಾರವರಿಗೆ ಸೊಂಟಕ್ಕೆ ಗುದ್ದಿದ ನೋವಾಗಿದ್ದು ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಮನೋಜ್‌ ಹೆಚ್‌ ರವರಿಗೆ ಬಲ ಕೈಗೆ ಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  107/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಬದ್ರುದ್ದೀನ್‌ ಪ್ರಾಯ 42 ವರ್ಷ ತಂದೆ:ಇಸ್ಮಾಯಿಲ್‌ವಾಸ:ಪರಿಯಲ್ತಡ್ಕ ಮನೆ ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:27-08-2021 ರಂದು ತನ್ನ ಮನೆಯಾದ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪರಿಯಳ್ತಡ್ಕದಿಂದ-ಅಜ್ಜಿನಡ್ಕದ ಕಡೆಗೆ ತನ್ನ ಬಾಬ್ತು ಇನ್ನೋವಾ ಕಾರಿನಲ್ಲಿ ತನ್ನ ಸಂಬಂದಿಕರ ಮನೆಗೆ ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 08.10 ಗಂಟೆಗೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಮಣಿಲ ಎಂಬಲ್ಲಿಗೆ ತಲುಪಿದಾಗ ಉಕ್ಕುಡ ಕಡೆಯಿಂದ ಪುಣಚ ಕಡೆಗೆ ಹೋಗುತ್ತಿದ್ದ KL-07-BR-9095ನೇ ಟಾಟಾ ಇಂಡಿಕಾ ಕಾರಿನ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪುಣಚ ಕಡೆಯಿಂದ ಉಕ್ಕುಡ ಕಟೆಗೆ ಬರುತ್ತಿದ್ದ ಅಟೋ ರಿಕ್ಷಾ ನಂಬ್ರ KA-19-AC-1308ನೇದಕ್ಕೆ ಡಿಕ್ಕಿ ಪಡಿಸಿದ್ದನ್ನು ಪಿರ್ಯಾಧಿ ನೋಡಿ ಕಾರನ್ನು ನಿಲ್ಲಿಸಿ ಅಲ್ಲಿಗೆ ಹೋಗಿ ವಾಹನಗಳಲ್ಲಿ  ಅಪಘಾತಗೊಂಡ ಗಾಯಾಳುವನ್ನು ನೋಡಲಾಗಿ ತನ್ನ ಪರಿಚಯದ ಅಟೋ ರಿಕ್ಷಾದ ಚಾಲಕ ಮಹಮ್ಮದ್‌ ಅಶ್ರಫ್ ಆಗಿದ್ದು. ಆತನ ತಲೆಗೆ ಗಂಭಿರ ರಕ್ತಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಲ್ಲದೇ ಎರಡು ವಾಹನಗಳ ಎದುರು ಜಖಂಗೊಂಡಿರುತ್ತದೆ. ಅಪಘಾತಪಡಿಸಿದ ಕಾರು ಚಾಲಕನ ಹೆಸರು ತಿಳಿಯಲಾಗಿ ಕಮರುದ್ದೀನ್‌ ಎಂದು ತಿಳಿಯಿತು. ತಕ್ಷಣ ಪಿರ್ಯಾಧಿ ಮತ್ತು ಸ್ಥಳದಲ್ಲಿದ್ದ ಸಿರಾಜ್‌ ,ಕಮರುದ್ದೀನ್‌ ರವರು ಗಾಯಗೊಂಡ ಅಟೋ ಚಾಲಕನನ್ನು ಆರೈಕೆ ಮಾಡಿ ತನ್ನ ಕಾರಿನಲ್ಲಿ ವಿಟ್ಲ ಸಮುದಾಯ ಆರೋಗ್ಯೆ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಅಲ್ಲಿನ ವೈದೈರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಒಂದು ಅಂಬುಲೆನ್ಸನಲ್ಲಿ ಗಾಯಾಳು ಮಹಮ್ಮದ್‌ ಅಶ್ರಫನನ್ನು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರಿಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 114/2021 ಕಲಂ:279,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶನ್ ಫಾತ್ ಶರೀಫ್ ವಾಸ: ಕೈಕಂಬ ಮನೆ, ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕೈಕಂಬ ಎಂಬಲ್ಲಿ ಲುಕ್ಮಾನ್ ಸ್ಟೀಲ್ ಸೆಂಟರ್  ನ್ನು ನಡೆಸಿಕೊಂಡಿರುವುದಾಗಿದೆ. ಸದ್ರಿ ಸಂಸ್ಥೆಯಲ್ಲಿ ಕಬ್ಬಿಣ ಶೀಟ್ ಹಾಗೂ ಇನ್ನೀತರ ಹಾರ್ಡ್ ವೇರ್ ಸಾಮಾಗ್ರಿಗಳನ್ನು ರಿಟೈಲ್ ಹಾಗೂ ಹೋಲ್ ಸೇಲ್ ವ್ಯವಹಾರ ಮಾಡಿಕೊಂಡಿರುವುದಾಗಿದೆ.  2 ವರ್ಷಗಳ ಹಿಂದೆ ಪಿರ್ಯಾದಿದಾರರು ತಾಯಿಯ   ಚಿನ್ನದ ಕರಿಮಣಿ ಸರ ಮತ್ತು 10 ಚಿನ್ನದ ಉಂಗುರುಗಳನ್ನು  ಕೈಕಂಬದಲ್ಲಿರುವ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಡವಿರಿಸಿ 96, 000/- ರೂಪಾಯಿಯನ್ನು ಪಡೆದಿರುವುದಾಗಿದೆ.  ಸದ್ರಿ ಚಿನ್ನಾಭರಣಗಳನ್ನು ಪಿರ್ಯಾದಿದಾರರ  ಪತ್ನಿ ಶ್ರೀಮತಿ ಜಮೀಲಾ ರವರು   ಸುಮಾರು 3 ವಾರಗಳ ಹಿಂದೆ ಬಿಡಿಸಿಕೊಂಡು ಪಿರ್ಯಾದಿದಾರರಲ್ಲಿ ನೀಡಿದ್ದನ್ನು  ಪಿರ್ಯಾದಿದಾರರು ಲುಕ್ಮಾನ್ ಸ್ಟೀಲ್ ಸೆಂಟರಿನ ಕ್ಯಾಶ್ ಕೌಂಟರ್ ನಲ್ಲಿ ಇರಿಸಿರುವುದಲ್ಲದೆ  ವ್ಯವಹಾರದ ಬಾಬ್ತು  30 ಸಾವಿರ ಹಣವನ್ನು ಇರಿಸಿರುವುದಾಗಿದೆ.  ಹೀಗಿರುತ್ತಾ ದಿನಾಂಕ: 26.08.2021 ರಂದು ರಾತ್ರಿ 8:00 ಗಂಟೆಗೆ ಪಿರ್ಯಾದಿದಾರರು ತನ್ನ ಕಛೇರಿಗೆ ಶೆಟರ್ ಲಾಕ್ ಮಾಡಿ ಮನೆಗೆ ಹೋಗಿದ್ದು, ದಿನಾಂಕ: 27.08.2021 ರಂದು ಬೆಳಿಗ್ಗೆ 8:15 ಗಂಟೆಗೆ ಸಿಬ್ಬಂದಿ ಸಾದಿಕ್ ರವರು ಕಛೇರಿಯ ಶೆಟರನ್ನು ತೆರೆದು ಒಳ ಪ್ರವೇಶಿಸಿ ನೋಡಿದಾಗ ಅದರೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿಕೊಂಡಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಿದಾಗ ಕಛೇರಿಯ ಕ್ಯಾಶ್ ಕೌಂಟರ್ ನಲ್ಲಿದ್ದ  ಚಿನ್ನಾಭರಣಗಳನ್ನು ಹಾಗೂ ವ್ಯವಹಾರದ ಬಾಬ್ತು ಕ್ಯಾಶ್ ಕೌಂಟರ್ ನಲ್ಲಿದ್ದ ರೂಪಾಯಿ 30 ಸಾವಿರ ಹಣವನ್ನು ಯಾರೋ ಕಳ್ಳರು ದಿನಾಂಕ: 26.08.2021 ರಂದು ರಾತ್ರಿ 8:00 ಗಂಟೆಯಿಂದ 27.08.2021 ರಂದು ಬೆಳಿಗ್ಗೆ 8:15 ಗಂಟೆಯ ಮದ್ಯಾವಧಿಯಲ್ಲಿ ಕಛೇರಿಯ ಮಾಡಿನ ಹಂಚನ್ನು ತೆಗೆದು ಒಳ ಪ್ರವೇಶಿಸಿ ಕಳವು  ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 101/2021 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ದಿನಾಂಕ:27-08-2021 ರಂದು ಕಡಬ ಪೊಲೀಸ್‌ ಠಾಣೆಯಲ್ಲಿ ಕಲಂ 4.7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ ಕಾಯ್ದೆ-2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-08-2021 11:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080