ಅಭಿಪ್ರಾಯ / ಸಲಹೆಗಳು

ಬೆಳ್ಳಾರೆ ಪೂರ್ವದ್ವೇಶ ಕೊಲೆ ಪ್ರಕರಣ ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು

ಕೊಲೆ ಪ್ರಕರಣ ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು.
 
 
      ದಿನಾಂಕ 04-06-2022 ರಂದು 17-30 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪ್ಪಾಡಿ ಎಂಬಲ್ಲಿ ಚರಣ್ ರಾಜ್ ಎಂಬವರನ್ನು ಕಿಶೋರ್ ಪುಜಾರಿ ಮತ್ತು ಇತರರ ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು ಈ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2022 ಕಲಂ 302 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಇದೊಂದು ಪೂರ್ವದ್ವೇಷದಿಂದ ಮಾಡಿರುವ ಕೊಲೆಯಾಗಿರುತ್ತದೆ. ಈ ಹಿಂದೆ ಮೃತ ಚರಣ್ ರಾಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮಾರ್ಲ ಎಂಬವರನ್ನು ಕೊಲೆ ಮಾಡಿದ್ದು ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡು ಪೆರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿತರುಗಳು ಹೊಂಚುಹಾಕಿ ಕೊಲೆ ಮಾಡಿರುವುದಾಗಿದೆ.
         
       ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಆರೋಪಿತರುಗಳಾದ 1) ಕಿಶೋರ್ ಪುಜಾರಿ ( 34), 2) ರಾಕೇಶ್ ಮಡಿವಾಳ (27), 3) ರೇಮಂತ್ ಗೌಡ (26), 4) ನರ್ಮೆಶ್ ರೈ(29), 5) ನಿತಿಲ್ ಶೆಟ್ಟಿ (23), 6) ವಿಜೇಶ್(22) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಕ್ರತ್ಯಕ್ಕೆ ಉಪಯೋಗಿಸಿದ ಬಾಳುಕತ್ತಿ-1 , ರಾಡ್ -2 ಮತ್ತು ಮೋಟಾರ್ ಸೈಕಲ್ -2 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.
 
       ಸದ್ರಿ ಪ್ರಕರಣದ ಪತ್ತೆ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಋಷಿಕೇಶ್ ಭಗವಾನ್ ಸೊನವಣೆ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ್ ಚಂದ್ರ ಹಾಗು ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಗಾನಾ.ಪಿ.ಕುಮಾರ್ ರವರ ಮಾರ್ಗದರ್ಶನದಂತೆ ಶ್ರೀ ನವೀನ್ ಚಂದ್ರ ಜೋಗಿ, ಪೊಲೀಸ್ ವೃತ್ತ ನಿರೀಕ್ಷಕರು, ಮತ್ತು ಸಿಬ್ಬಂದಿಗಳು, ಶ್ರೀ ರುಕ್ಮ ನಾಯ್ಕ್ ಪಿ ಎಸ್ ಐ ಬೆಳ್ಳಾರೆ ಮತ್ತು ಸಿಬ್ಬಂದಿಗಳು, ಶ್ರೀ ದಿಲೀಪ್ ಪೊಲೀಸ್ ಉಪನಿರೀಕ್ಷಕರು ಸುಳ್ಯ ಠಾಣೆ, ಮತ್ತು ಸಿಬ್ಬಂದಿಗಳು, ಶ್ರೀ ಉದಯರವಿ ಪಿ ಎಸ್ ಐ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳು, ಶ್ರೀ ರಾಜೇಶ್ ಪುತ್ತೂರು ನಗರ ಠಾಣೆ ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.

https://dkpolice.karnataka.gov.in/storage/pdf-files/bellare 49 22 murder case detection.jpeg

ಇತ್ತೀಚಿನ ನವೀಕರಣ​ : 09-06-2022 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080