ಅಭಿಪ್ರಾಯ / ಸಲಹೆಗಳು

ಧರ್ಮಸ್ಥಳ ಪೊಲೀಸರಿಂದ ಅಂತರ್‌ರಾಜ್ಯ ಕಳ್ಳತನ ಮಾಡಿದ ಆರೋಪಿಯ ಪತ್ತೆ ಸುಮಾರು ಲಕ್ಷಾಂತರ ಬೆಲೆ ಬಾಳುವ ಚಿನ್ನಭರಣ ವಶಕ್ಕೆ

           ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನ ಘಟ್ಟದ ಬಳಿ ನಡೆದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ  ಪೊಲೀಸ್ ಠಾಣೆಯಲ್ಲಿ ಕಲಂ: 379 ಐ,ಪಿ,ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ತಂಡವು ಪ್ರಕರಣದ ಆರೋಪಿ ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ಮಿತುನ್‌ ಚೌವಾಣ್‌ (31ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿ ಸ್ವಂತ ಮನೆಯಾದ ಮಹಾರಾಷ್ಟ್ರ  ರಾಜ್ಯ ಸೊಲ್ಲಾಪುರ ಜಿಲ್ಲೆಯಾ ಸಾಂಗೋಲಾ ತಾಲೂಕಿನ ಪಾರೆ ಗ್ರಾಮದ ಇಂದಿರಾನಗರ ಮನೆ ಎಂಬಲ್ಲಿಂದ ಅಂದಾಜು ಮೌಲ್ಯ ಸುಮಾರು 2.4 ಲಕ್ಷದ  ಆಭರಣಗಳನ್ನು ವಶಪಡಿಸಲಾಗಿದೆ.

            ಆರೋಪಿಯು ದೇಶದ ವಿವಿಧ ಪ್ರಸಿದ್ದ  ಯಾತ್ರ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸದವನಾಗಿದ್ದು,  ಸದ್ರಿ ಆರೋಪಿಯ ಮೇಲೆ ಮಹಾರಾಷ್ಟ್ರ ರಾಜ್ಯದ ಪೂಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿರುತ್ತದೆ. ಸದ್ರಿ ಪತ್ತೆ ತಂಡದಲ್ಲಿ ಮಾನ್ಯ ಪೊಲೀಸ್‌ ಅಧೀಕ್ಷಕರು ಋಷೀಕೇಶ್‌ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಕುಮಾರ್‌ ಚಂದ್ರ ರವರ ಮಾರ್ಗದರ್ಶನದಲ್ಲಿ  ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಮಾನ್ಯ  ಪ್ರತಾಪ್ ಸಿಂಗ್‌ ತೋರಟ್‌ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶ್ರೀ ಶಿವಕುಮಾರ್‌ ರವರ  ನೇತೃತ್ವದಲ್ಲಿ ಪಿಎಸ್ಐ  ಕೃಷ್ಣಕಾಂತ ಅ ಪಾಟೀಲ್‌ ರವರ ವಿಶೇಷ ತಂಡದ ಸಿಬ್ಬಂದಿಗಳಾದ ಹೆಚ್‌ ಸಿ ಬೆನ್ನಿಚ್ಚನ್‌, ಹೆಚ್ ಸಿ ಪ್ರಶಾಂತ್‌, ಹೆಚ್ ಸಿ ರಾಹುಲ್‌, ಪಿಸಿ ಸತೀಶನಾಯ್ಕ ಜಿ, ಹೆಚ್‌ ಸಿ ವಿಜು ,ಹೆಚ್‌ ಸಿ ರವೀಂದ್ರ ,ಹೆಚ್‌ ಸಿ ಕೃಷ್ಣಪ್ಪ, ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್‌ ಮತ್ತು ದಿವಾಕರ ರವರು ಬಾಗವಹಿಸಿರುತ್ತಾರೆ, ಪ್ರಕರಣ ದಾಖಲಾಗಿ ಪ್ರಕರಣ ಬೇದಿಸಿದ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್‌  ಅಧಿಕ್ಷಕರು ಬಹುಮಾನವನ್ನು ಘೋಷಿಸಿರುತ್ತಾರೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ .        

https://dkpolice.karnataka.gov.in/gallery/Dharmasthala PS Theft Case Detection/kn

ಇತ್ತೀಚಿನ ನವೀಕರಣ​ : 29-03-2022 03:02 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080